ಪ್ರಮುಖ ಸುದ್ದಿ
BSY ಗೆ ವಯಸ್ಸಾಗಿದೆ, ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪ – ದರ್ಶನಾಪುರ ಆರೋಪ
BSY ಗೆ ವಯಸ್ಸಾಗಿದೆ, ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪ – ದರ್ಶನಾಪುರ ಆರೋಪ
ಯಾದಗಿರಿಃ ಮುಖ್ಯಮಂತ್ರಿ ಯಡಿಯೂರಪ್ಪನಿಗೆ ವಯಸ್ಸಾಗಿದೆ. ರಾಜ್ಯದ ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪವಿದೆ. ಹೀಗಾಗಿ ಬಿಜೆಪಿಯ ಹಿರಿಯರು, ಕಿರಿಯರು ಅಲ್ಲದೆ ಕಾಂಗ್ರೆಸ್ ನಿಂದ ವಲಸೆ ಹೋಗಿ ಸಚಿವರಾದವರು ಅಸಮಾಧಾನ ವಾಗಿದ್ದಾರೆ. ಹೀಗಾಗಿ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ ಎಂದು ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆರೋಪಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿಯ ಸಚಿವರು ದೆಹಲಿಗೆ ಹೋಗಿ ಅವರ ಹೈಕಮಾಂಡ್ ಗೆ ಸಿಎಂ ಬದಲಾವಣೆ ಮಾಡುವಂತೆ ಮನವಿ ಮಾಡಿ ಬಂದಿದ್ದಾರೆ ಎಂದು ದೂರಿದರು.
ಅಧಿಕಾರ ಆಸೆಗಾಗಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಅಭಿವೃದ್ಧಿ ಕಾರ್ಯ ಮಾತ್ರ ಕೈಗೊಳ್ಳುತ್ತಿಲ್ಲ. ಅವರವರ ಅಧಿಕಾರ ಲಾಲಸೆಗೆ ಬಡಿದಾಡುತ್ತಿದ್ದು, ಜನಹಿತ ಕಾರ್ಯ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.