ಜನ ಹಿತ ಮರೆತ ಬಿಜೆಪಿ ಸರ್ಕಾರ ದರ್ಶನಾಪುರ ಆರೋಪ
ಸಿಎಂ ಕೆಲಸ ಮಗ ನಿರ್ವಹಣೆ ದರ್ಶನಾಪುರ ಆರೋಪ
ಯಾದಗಿರಿ, ಶಹಾಪುರಃ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನ ಹಿತ ಬಯಸಿ ಕೆಲಸ ಮಾಡುತ್ತಿಲ್ಲ. ತೈಲ ಬೆಲೆ ಏರಿಕೆಯಿಂದ ದೇಶದ ಜನರ ಜೀವನ ಅಧೋಗತಿ ತಲುಪುತ್ತಿದೆ. ಆದಾಗ್ಯು ಕೇಂದ್ರ ಸರ್ಕಾರ ಕಾಳಜಿವಹಿಸುತ್ತಿಲ್ಲ. ಇತ್ತ ರಾಜ್ಯ ಸರ್ಕಾರ ಯಡಿಯೂರಪ್ಪ ನಾಮಕೆವಾಸ್ತೆ ಸಿಎಂ ಆಗಿದ್ದಾರೆ. ಎಲ್ಲವನ್ನು ಅವರ ಮಗನೇ ಕೆಲಸ ಮಾಡುತ್ತಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಆರೋಪಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಡೆ ಕುರಿತು ಟೀಕಿಸಿದರು. ಜನಪರ ಕಾಳಜಿ ಹೊಂದಿರದ ಸಂಪೂರ್ಣ ನಿರ್ಲಕ್ಷವಹಿಸಿದ ಸರ್ಕಾರ ಬಿಜೆಪಿ.
ರಾಜ್ಯದಲ್ಲೂ ಕೋವಿಡ್ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕಾರ್ಯ ನಿರ್ವಹಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ತಮ್ಮ ಖುರ್ಚಿ ಭದ್ರ ಪಡಿಸಿಕೊಳ್ಳುವಲ್ಲಿ ಸದಾ ಬ್ಯೂಸಿಯಾಗಿದ್ದಾರೆ. ಸಿಎಂ ಯಡಿಯೂರಪ್ಪನವರಿಗೂ ಕೆಲಸ ಮಾಡುವ ಶಕ್ತಿ ಇಲ್ಲ. ಆದಾಗ್ಯು ಖುರ್ಚಿ ಬಿಡುವದಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಉಳಿದಂತೆ ಸೂಪರ್ ಸಿಎಂ ಆಗಿ ಅವರ ಮಗನೇ ರಾಜ್ಯ ಆಡಳಿತ ಮಾಡುತ್ತಿದ್ದಾರೆ ಎಂದು ದೂರಿದರು. ಕೆಲಸ ಮಾಡುವ ಶಕ್ತಿ ಕುಂದಿದ ಮೇಲೆ ಖುರ್ಚಿ ಬಿಟ್ಟು ನಡೆಯಬೇಕು ಅದು ಬಿಟ್ಟು ಅದಕ್ಕೆ ಅಂಟಿಕೊಂಡು ಕುಳಿತುಕೊಳ್ಳುವದು ಸರಿಯಲ್ಲ ಎಂದು ಟೀಕಿಸಿದರು.