ಪ್ರಮುಖ ಸುದ್ದಿ
ಗಂಡಸ್ಥನ ಬಗ್ಗೆ ಮಾತಾಡೋರು ಡಿಕೆ ವಿರುದ್ಧ ಚುನಾವಣೆಗೆ ನಿಲ್ಲಲಿ-ದರ್ಶನಾಪುರ
ಅಶ್ವಥ್ ನಾರಾಯಣ ಡಿಕೆ ವಿರುದ್ಧ ಚುನಾವಣೆಗೆ ನಿಲ್ಲಲಿ ದರ್ಶನಾಪುರ ಸವಾಲ್
yadgiri, ಶಹಾಪುರಃ ಗಂಡಸ್ತನ ಬಗ್ಗೆ ಮಾತಾಡುವ ಅಶ್ವಥ್ ನಾರಾಯಣ ಡಿಕೆ ಶಿವಕುಮಾರ ಅವರ ವಿರುದ್ಧ ಚುನಾವಣೆಗೆ ನಿಂತು ಗೆದ್ದು ಬರಲಿ ಅವರ ಪೌರುಷವನ್ನು ಅಲ್ಲಿ ತೋರಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸವಾಲ್ ಹಾಕಿದರು.
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲದಲ್ಲಿ ನಡೆದ 4.11 ಕೋಟಿ ವೆಚ್ಚದ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಶಂಕುಸ್ಥಾಪನೆ ನಂತರ ಮಾಧ್ಯಮದೊಂದಿಗೆ ಮಾತನಾಡುವಾಗ, ಗಂಡಸ್ತನ ಬಗ್ಗೆ ಮಾತಾಡಿರುವ ಸಚಿವ ಅಶ್ವಥ ನಾರಾಯಣ ಕುರಿತು ಮಾಧ್ಯದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಅವರ ಸಮ್ಮುಖದಲ್ಲಿ ಇಂಥ ಮಾತನಾಗಳನ್ನಾಡುವದು ಸರಿಯಲ್ಲ.
ಅದು ಅಭಿವೃದ್ಧಿಕಾರ್ಯ ಕುರಿತ ಸಭೆಯಾಗಿತ್ತು. ಅದು ಎಲ್ಲರಿಗೂ ಸಂಬಂಧಿಸಿದು, ಆ ವೇಳೆ ಇಂಥ ಅಸಂಬದ್ಧ ಮಾತನಾಡುವದು ಸರಿಯಲ್ಲ. ಬೇಕಿದ್ರೆ ಡಿಕೆ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ನೋಡುವ ಎಂದ ಅವರು, ವೇದಿಕೆ ಮೇಲೆ ಡಿಕೆ ಸುರೇಶ ಅವರು ತಕ್ಕ ಉತ್ತರ ನೀಡಿದ್ದಾರೆ, ಅಶ್ವಥ್ ನಾರಾಯಣ ಅವರಿಗೆ ಅಧಿಕಾರವಿದೆ ಎಂದು ಏನಾದರೂ ಮಾತನಾಡುವದು ಸರಿಯಲ್ಲ ಎಂದರು.