ಪ್ರಮುಖ ಸುದ್ದಿಸಂಸ್ಕೃತಿ
ನಾಡಹಬ್ಬ ಉದ್ಘಾಟನೆಗೆ ಸಾಹಿತಿ ಎಸ್.ಎಲ್.ಭೈರಪ್ಪ ಆಯ್ಕೆ
ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆಪ್ರವಾಹದಿಂದ ಜನಜೀವನ ತತ್ತರಿಸಿದೆ. ಮತ್ತೂ ಕೆಲವು ಕಡೆ ಬರಪರಿಸ್ಥಿತಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಈ ವರ್ಷ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ನಿರ್ದರಿಸಲಾಗಿದೆ. ಸಾಂಪ್ರದಾಯಿಕ ದಸರಾ ಹಬ್ಬ ವೀಕ್ಷಣೆಗೆ ವಿಶ್ವದೆಲ್ಲೆಡೆಯಿಂದ ಜನ ಆಗಮಿಸಲಿದ್ದು ಪ್ರವಾಸೋದ್ಯಮ ಅಭಿವೃದ್ಧಿ ಕಾಣಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಈ ವರ್ಷದ ಮೈಸೂರು ದಸರಾಕ್ಕೆ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಮೈಸೂರು ದಸರಾ ಉದ್ಘಾಟಿಸಲಿರುವ ಸಾಹಿತಿ ಎಸ್.ಎಲ್.ಭೈರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿ 1949ರಿಂಲೂ ನಾನು ದಸರಾ ನೋಡುತ್ತಿದ್ದಾನೆ. ಮೂರ್ನಾಲ್ಕು ಬಾರಿ ಅಷ್ಟೇ ಹತ್ತಿರದಿಂದ ದಸರಾ ವೀಕ್ಷಿಸಿದ್ದೇನೆ. ನನ್ನನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು ಸಂತೋಷ ತಂದಿದೆ ಎಂದಿದ್ದಾರೆ.