ಪ್ರಮುಖ ಸುದ್ದಿ
ಕೊಟ್ಟ ಸಾಲ ಕೇಳಲು ಹೋದ ಯುವಕನ ಕೊಲೆ
ಸಾಲ ಕೇಳಲು ಹೋದವನನ್ನೆ ಕೊಂದ ಕಿರಾತಕ
ಯಾದಗಿರಿಃ ಕಳೆದ ಆ. 19 ರಂದು ಯುವಕನೊಬ್ಬ ತಾನು ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕೇಳಲು ಹೋದಾಗ ಆ ಯುವಕನ್ನೆ ಸಾಲ ಪಡೆದವರು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.
ದುಂಡಪ್ಪ ಹೂಗಾರ (26) ಕೊಲೆಯಾದ ಯುವಕ. ಈತನನ್ನು ಕೊಲೆಗೈದು ಕಾಲುವೆಯಲ್ಲಿ ಬಿಸಾಕಿ ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ.
ಕೆಂಭಾವಿ ಪಟ್ಟಣದ ಮಾರಿಗೆಪ್ಪ ಕುಂಚಿಕೊರು ಎಂಬಾತನಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ವಿಷಯ ತಿಳಿದ ಪೊಲೀಸರು ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.