Homeಜನಮನಪ್ರಮುಖ ಸುದ್ದಿ
ಶಾಲಾ ಮಕ್ಕಳಿಗೆ ಅ.3 ರಿಂದ 20 ರವರೆಗೆ ದಸರಾ ರಜೆ ಘೋಷಣೆ
(Dasara Holidays) 2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದ್ದು, ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯೂ ಒಟ್ಟು 18 ದಿನ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆ ಸಿಗಲಿದೆ. ಇನ್ನು ಅಕ್ಟೋಬರ್ 21 ರಿಂದ 2ನೇ ಅವಧಿಯು ಆರಂಭವಾಗಲಿದೆ.
ಈ ಆದೇಶದಂತೆ ಕ್ರಮ ವಹಿಸಲು ಎಲ್ಲ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರ ಗಮನಕ್ಕೆ ತರಲು ತಿಳಿಸಲಾಗಿದೆ.
ದಸರಾ ರಜೆ ಮುಗಿಯುತ್ತಿದ್ದಂತೆ ಮತ್ತೆ ಅಕ್ಟೋಬರ್ ನಲ್ಲಿ ಭಾನುವಾರದ ಜೊತೆಗೆ ಅಕ್ಟೋಬರ್ 31ರಂದು ದೀಪಾವಳಿ ರಜೆಯಾಗಿ ಶಾಲಾ ಮಕ್ಕಳಿಗೆ ಮತ್ತೆರಡು ದಿನ ರಜೆ ಈ ತಿಂಗಳಲ್ಲಿ ಸಿಗಲಿವೆ.