ದಸರಾ ಸರಳವಾಗಿ ಆಚರಿಸಲು ಪ್ರಧಾನಿ ಸಲಹೆ – ಶ್ರೀರಾಮುಲು
ದಸರಾ ಸರಳವಾಗಿ ಆಚರಿಸಲು ಪ್ರಧಾನಿ ಸೂಚನೆ, ಹಲವು ಸಲಹೆ
ಬೆಂಗಳೂರಃ ಮೈಸೂರಿನಲ್ಲಿ ಡೆಡ್ಲಿ ಕೊರೊನಾ ಆರ್ಭಟ ಜಾಸ್ತಿ ಇದ್ದು, ಈ ಬಾರಿ ದಸರಾ ಸಂಭ್ರಮವನ್ನು ಸರಳವಾಗಿ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯ ಸರ್ಕಾರವು ಸರಳವಾಗಿ ಆಚರಿಸಲು ಕಟಿಬದ್ಧವಾಗಿದ್ದು, ಪ್ರಧಾನಿಯವರ ಸಲಹೆ ಸೂಚನೆಯಂತೆ ನಿಭಾಯಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ದೇಶದ 17 ರಾಜ್ಯಗಳ 60 ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ಮಿತಿ ಮೀರಿದೆ. ಅದರಲ್ಲಿ ರಾಜ್ಯದ ಬೆಂಗಳೂರು, ಮೈಸೂರು ಕೂಡ ಸೇರಿವೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ನಿಗಾವಹಿಸಲು ಪ್ರಧಾನಿ ಅವರು ಸಲಹೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಯಡಿಯೂರಪ್ಪ ನವರಿಗೆ ಸಲಹೆ ನೀಡಿರುವ ಮೋದಿಯವರು, ದಸರಾ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆ ಭಾಗವಹಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಏನು ಮಾಡಬೇಕು. ಜನರ ಸುರಕ್ಷತೆಗೆ ಯಾವ್ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವಿವರಿಸಿದರು.