ಬೀದರಃ ನವರಾತ್ರಿ, ದೇವಿ ಪೂಜಾ ಸಂಪನ್ನ

ಝರನಾ ನರಸಿಂಹ ಸ್ವಾಮಿ ದರ್ಶನಕ್ಕೆ ಭಕ್ತರ ದಂಡು
ಬೀದರಃ ನವರಾತ್ರಿ ಹಬ್ಬದಂಗವಾಗಿ ಭಕ್ತಾಧಿಗಳು ಕಳೆದ 10 ದಿನಗಳಿಂದ ದೇವಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು.
ನವರಾತ್ರಿ ಅಂಗವಾಗಿ ಘಟ (ಸಸಿ) ಸ್ಥಾಪನಾ ಮಾಡಿದ್ದ ಭಕ್ತಾಧಿಗಳು ಇಂದು ಝರನಿ ನರಸಿಂಹ ಸ್ವಾಮೀ ಕ್ಷೇತ್ರದ ಬಳಿ ಹರಿಯುವ ನೀರಿಗೆ ಬಿಡುವ ಮೂಲಕ ಭಕ್ತಿಯಿಂದ ತಾಯಿ ಅಂಭಾ ಭವಾನಿಯನ್ನು ಪ್ರಾರ್ಥಿಸಿದರು.

ಘಟ ಸ್ಥಾಪನೆ ಮಾಡಿ ಕಳೆದ 9 ದಿನಗಳಿಂದ ದೇವಿ ಪೂಜಾ ಕೈಂಕರ್ಯದಲ್ಲಿ ಭಕ್ತಿ ಉತ್ಸಾಹದಿಂದ ನೆರವೇರಿಸಿ ನಿನ್ನೆ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದಿದ್ದರು.
ಕಳೆದ ವರ್ಷ ಕೊರೊನಾರ್ಭಟದಿಂದ ದಸರಾ ಹಬ್ಬ ಕಳೆಗುಂದಿತ್ತು. ಈ ಬಾರಿ ನಾಗರಿಕರು ಖುಷಿಯಿಂದ ಎಲ್ಲಡೆ ಹಬ್ಬ ಆಚರಣೆ ಮಾಡುವದು ಕಂಡು ಬಂದಿತು.
ಝರನಾ ನರಸಿಂಹ ಸ್ವಾಮೀ ದರ್ಶನಕ್ಕೆ ಭಕ್ತರ ದಂಡು
ದಸರಾ ಸಂಭ್ರಮದ ನಡುವೆ ಇಂದು ಶನಿವಾರ ನಿಮಿತ್ಯ ಇಲ್ಲಿನ ನರಸಿಂಹ ಸ್ವಾಮೀ ಝರನಾ ಸುಕ್ಷೇತ್ರಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಬೆಳ್ಳಂ ಬೆಳಗ್ಗೆಯಿಂದಲೇ ಭಕ್ತಾಧಿಗಳು ಝರನಾ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದರು. ಹಲವರು ಸುಕ್ಷೆತ್ರದ ಸನ್ನಿಧಿಯಲ್ಲೇ ನೈವೇದ್ಯ ತಯಾರಿಸಿ ಶ್ರೀದೇವರಿಗೆ ಸಮರ್ಪಿಸಿ ಕೃತಾರ್ಥರಾದರು.