ಪ್ರಮುಖ ಸುದ್ದಿ

ದತ್ತಾತ್ರೇಯ ಪೀಠದ ಪೂಜಾರಿ ನಿಖಿಲ್ ಎಲ್ಲಿದ್ದೀಯಪ್ಪ ಅಂದಿದ್ದೇಕೆ..?

ಗಾಣಗಾಪುರದ ದತ್ತಾತ್ರೇಯ ಪೀಠದಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ..

ಗಾಣಗಾಪುರ ದರ್ಶನ – ನಿಖಿಲ್ ಎಲ್ಲಿದ್ದೀಯಪ್ಪಾ ಬಂದ ಧ್ವನಿಗೆ ಸಿಎಂ ತಬ್ಬಿಬ್ಬು

ಗಾಣಗಾಪುರಃ ಚಿಂಚೋಳಿ ಉಪ ಚುನಾವಣೆ ನಿಮ್ಮಿತ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಚಾರಕ್ಕಾಗಿ ಕಲಬುರ್ಗಿಗರ ಆಗಮಿಸಿದ್ದಾಗ, ಮೊದಲು ಈ ಭಾಗದ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಿ ಶ್ರೀದತ್ತನ ದರ್ಶನ ಪಡೆದರು.

ನಂತರ ಸಿಎಂ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಹಿರಿಯ ಶ್ರೀಗಳಿಂದ ಆಶೀರ್ವಚನ ಜರುಗಿತು.

ಇದೇ ವೇಳೆಗೆ ಸಿಎಂ ಕುಮಾರಸ್ವಾಮಿ ಯವರನ್ನು ಸನ್ಮಾನಿಸುವಾಗ ಇಲ್ಲಿನ ಅರ್ಚಕ‌ ದತ್ತಾತ್ರೇಯ ಪೂಜಾರಿ ಎಂಬುವರು ತನ್ನ ಮಗನಾದ ನಿಖಿಲ್ ಪೂಜಾರಿ ಎಂಬಾತನನ್ನು ಕುಮಾರಸ್ವಾಮಿ ಯವರನ್ನು ಸನ್ಮಾನ ಮಾಡಲು ನಿಖಿಲ್‌ ಪುಜಾರಿಯನ್ನು ಕರೆಯಲು ನಿಖಿಲ್ ಎಲ್ಲಿದ್ದೀಯಪ್ಪಾ ಬಾ ಬೇಗ ಎಂದು ಕರೆದಿದ್ದಾರೆ.

ಆಗ ಸಿಎಂ ಸೇರಿದಂತೆ ಅಲ್ಲಿದ್ದವರೆಲ್ಲರಲ್ಲೂ ಒಂದು ಕ್ಷಣ ಗಾಬರಿ ಆ ಮೇಲೆ ಇಲ್ಲಿನ ಅರ್ಚಕರ‌ ಮಗನ ಹೆಸರು ಕಿರಿಯ ಅರ್ಚಕ ನಿಖಿಲ್ ಪೂಜಾರಿಯವರನ್ನು ಕರೆದಿದ್ದಾರೆ ಎಂದು ತಿಳಿದ‌ ಮೇಲೆ ಎಲ್ಲರ ಮೊಗದಲ್ಲಿ ನಗು ಕಂಡು ಬಂದಿತು ಎನ್ನಲಾಗಿದೆ. ದೇವಸ್ಥಾನದ ದತ್ತಾತ್ರೇಯ ಪೀಠದಲ್ಲಿ

ಇಂತಹ ಪ್ರಸಂಗ ನಡೆದಿರುವದರಿಂದ ಕುಮಾರಸ್ವಾಮಿ ಯವರು ಗಲಿಬಿಲಿ‌ಗೊಂಡಿದ್ದರು ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ ಕುಮಾರಸ್ವಾಮಿ ಯವರು ದತ್ತಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸುವಾಗ ದೀಪ ಹಚ್ಚಲು ಬತ್ತಿ ಇಲ್ಲವೆಂದು ದತ್ತಾತ್ರೇಯ ಪೂಜಾರಿ ಎಂಬ ಅರ್ಚಕ ತನ್ನ ಮಗ ನಿಖಿಲ್ ನನ್ನು ನಿಖಿಲ್ ಎಲ್ಲಿದ್ದೀಯಪ್ಪಾ.. ಹಾಂ..ಬೇಗ ಬತ್ತಿ ತಗೊಂಡಬಾ ಎಂದಿದ್ದಾರೆ ಎನ್ನಲಾಗಿದೆ.

ದೀಪಕ್ಕೆ ಬತ್ತಿ ಸಿಗಲಿಲ್ಲ ಎಂಬುದು ಅಪಶಕುನವಾಗಬಾರದು ಮುಖ್ಯಮಂತ್ರಿ ಗಳಿಗೆ ಇದೇ ವಿಷಯ ಮಾಧ್ಯಮದವರು ಕೇಳುತ್ತಿರುವದರಿಂದಲೂ ತಕ್ಣ ಎಚ್ಚೆತ್ತುಕೊಂಡ ಇಲ್ಲಿನ ಅರ್ಚಕರು ಸನ್ಮಾನ‌ ಮಾಡುವಾಗ ಕರೆದಿರುವದು ಎಂದು ಸಮಜಾಯಿಸಿ ನೀಡುತ್ತಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button