ಪ್ರಮುಖ ಸುದ್ದಿ
ಕಲಬುರಗಿ : ನೂತನ ಜಿಲ್ಲಾಧಿಕಾರಿ ಜೋತ್ಸ್ನಾ ಅಧಿಕಾರ ಸ್ವೀಕಾರ
ಕಲಬುರಗಿ : ನೂತನ ಜಿಲ್ಲಾಧಿಕಾರಿಯಾಗಿ ವಾಸಿರೆಡ್ಡಿ ವಿಜಯ ಜೋತ್ಸ್ನಾ ಇಂದು ಅಧಿಕಾರ ಸ್ವೀಕರಿಸಿದರು. ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಗಿರುವ ಶರತ್.ಬಿ ಅಧಿಕಾರ ಹಸ್ತಾಂತರ ಮಾಡಿದರು. 2010 ನೇ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯ ಜೋತ್ಸ್ನಾ ಈ ಹಿಂದೆ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ, ರಾಜ್ಯ ಕಟ್ಟಡ & ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.