ಪ್ರಮುಖ ಸುದ್ದಿ
ಪೊಲೀಸ್ ಪೇದೆ ಎನ್ನುವಂತಿಲ್ಲ ಕಾನ್ಸ್‌ಟೇಬಲ್ ಎನ್ನಲು ಆದೇಶ
ಪೊಲೀಸ್ ಪೇದೆ ಎನ್ನುವಂತಿಲ್ಲ ಕಾನ್ಸ್‌ಟೇಬಲ್ ಎನ್ನಲು ಆದೇಶ
ಬೆಂಗಳೂರಃ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇನ್ನು ಮೇಲೆ ಪೊಲೀಸ್ ಪೇದೆ ಎಂಬ ಪದ ಬಳಕೆ ಮಾಡದೆ, ಕಾನ್ಸ್‌ಟೇಬಲ್ ಪದ ಬಳಸಬೇಕು ಎಂದು ಕರ್ನಾಟಕ ಪೊಲಿಸ್ ಇಲಾಖೆ ಆದೇಶ ನೀಡಿದೆ.
ಸಾಮಾನ್ಯವಾಗಿ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೆಬಲ್ ಗಳನ್ನು ಪೊಲೀಸ್ ಪೇದೆ ಮುಖ್ಯ ಪೊಲೀಸ್ ಪೇದೆ ಎಂದು ಕರೆಯಲಾಗುತ್ತಿದೆ. ಇದು ಅಷ್ಟೊಂದು ಸಮಜಂಸವಲ್ಲ.ಕಾರಣ ಇನ್ಮುಂದೆ ಕಾನ್ಸ್‌ಟೇಬಲ್, ಹೆಡ್ ಕಾನ್ಸ್ ಟೇಬಲ್ ಎಂದು ಕರೆಯಬೇಕು.
ಬರವಣಿಗೆಯಲ್ಲೂ ಇದೇ ರೀತಿ ಪದಬಳಕೆ ಮಾಡಬೇಕೆಂದು ಪೊಲೀಸ್ ಮಹಾ ನಿರ್ದೇಶಕ, ಆರಕ್ಷಕ ಮಹಾನಿರೀಕ್ಷಕ ಅಜಯಕುಮಾರ ಸಿಂಹ ಆದೇಶ ಹೊರಡಿಸಿದ್ದಾರೆ.