ಪ್ರಮುಖ ಸುದ್ದಿ

DC ಮಂಜುನಾಥ ಅವರಿಂದ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ

ಅಪಘಾತ ಜೀವ ರಕ್ಷಕ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ

ಯಾದಗಿರಿಃ ಕಾರ್ಮಿಕರ ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹರು ಅವುಗಳ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ತಿಳಿಸಿದರು.

ನಗರದಲ್ಲಿ ಆಟೋ ಚಾಲಕರಿಗೆ ಸರ್ಕಾರ ಜಾರಿಗೊಳಿಸಿದ ಅಪಘಾತ ಜೀವ ರಕ್ಷಕ ಸಹಾಯ ಹಸ್ತ ಯೋಜನೆಯಡಿ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಅವರು ಮಾತನಾಡಿದರು.

ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಈ ಕಿಟ್ ಸಹಕಾರಿಯಾಗಲಿದೆ. ಯಾವುದೇ ಸಂದರ್ಭದ ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಕಿಟ್‍ನಲ್ಲಿರುವ ಔಷಧಿಗಳನ್ನು ಬಳಸಿ ಪ್ರಥಮ ಹಂತದ ಚಿಕಿತ್ಸೆ ನೀಡಿದ, ನಂತರ ಸರ್ಕಾರ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮಂಡಲಿ ಅಂಬೇಡ್ಕರಸ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಈ ಸೌಲಭ್ಯವನ್ನು ಕಲ್ಪಿಸಿದೆ.

ಈ ಕಿಟ್‍ನ್ನು ಎಲ್ಲಾ ಆಟೋ ಚಾಲಕರ, ವಾಹನ ಚಾಲಕರು ಬಳಸಬೇಕು. ತಮ್ಮ ವಾಹನದಲ್ಲಿ ಮುಂಜಾಗೃತವಾಗಿ ಈ ಕಿಟ್ ಇಟ್ಟಿರಬೇಕು ಎಂದು ಸಲಹೆ ನೀಡಿದರು. ನೂರಾರು ಜನರಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿ ಇತರರಿದ್ದರು.
——–

Related Articles

Leave a Reply

Your email address will not be published. Required fields are marked *

Back to top button