ಪ್ರಮುಖ ಸುದ್ದಿ
ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಅನುಮತಿ ನಿರಾಕರಣೆಗೆ ಕಾರಣವೇನು?
ಕಲಬುರಗಿ : ಮಾರ್ಚ್ 27ರಂದು ಜಿಲ್ಲೆಯ ಜೇವರಗಿ ಪಟ್ಟಣದಲ್ಲಿ ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳದಿಂದ ರಾಮನವಮಿ ಮತ್ತು ಹನುಮ ಜಯಂತಿ ಅಂಗವಾಗಿ ವಿರಾಟ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿತ್ತು. ಸಾಮಜೋತ್ಸವದ ವೇಳೆ ಭವ್ಯ ಶೋಭಾ ಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಸಾಧ್ವಿ ಸರಸ್ವತಿ ದೇವಿ ದಿಕ್ಸೂಚಿ ಭಾಷಣ ಮಾಡಲಿದ್ದ ಇತರೆ ಮಠಾಧೀಶರು ಹಾಗೂ ಹಿಂದೂ ಮುಖಂಡರು ಭಾಗವಹಿಸಲಿದ್ದರು. ಆದರೆ, ಜಿಲ್ಲಾಡಳಿತ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಅನುಮತಿ ನಿರಾಕರಿಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಇರುವುದರಿಂದ ಹಿಂದೂ ಸಮಾಜೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸುವುದು ಸಾಧ್ಯವಿಲ್ಲ. ಹೀಗಾಗಿ, ಹಿಂದೂ ಸಮಾಜೋತ್ಸವ ವೇಳೆ ಅಹಿತಕರ ಘಟನೆಗಳು ನಡೆಯಕೂಡದು ಎಂಬ ಉದ್ದೇಶದಿಂದ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದ್ದಾರೆ.