ಪ್ರಮುಖ ಸುದ್ದಿ

ಕಲ್ಬುರ್ಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಃ ಬಿಜೆಪಿ ಅಧಿಕಾರ ದುರ್ಬಳಕೆ

ಕಲಬುರ್ಗಿಃ  ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಆಡಳಿತ ದುರುಪಯೋಗ ಹಾಗೂ ಮಾಮವಾರ್ಗದ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.

ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಟ್ವಿಟ್ ಗೆ ರೀ ಟ್ವಿಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು ರಾಜ್ಯಗಳಲ್ಲಿ ಸರಕಾರ ರಚಿಸುವುದಾಗಲೀ ಅಥವಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲೀ, ಬಿಜೆಪಿ ಆಡಳಿತ ದುರಪಯೋಗಪಡಿಸಿಕೊಂಡು, ಹಣದ ಆಮಿಷವೊಡ್ಡಿ‌ ವಿರೋಧ ಪಕ್ಷದವರನ್ನು ಬೆದರಿಸುತ್ತಿದ್ದಾರೆ ಎಂದು‌ ಆರೋಪಿಸಿದರು.

ಬಹುಶಃ ಅವರು‌ ಅಧಿಕಾರಕ್ಕೆ ಬರಲು ಇದೊಂದೆ ಮಾರ್ಗ ವಿದೆಯಂದು ತೋರುತ್ತದೆ ಎಂದಿದ್ದಾರೆ.

ಈ ಮುನ್ನ ಟ್ವಿಟ್ ಮಾಡಿದ್ದ ದರ್ಶನಾಪುರ ಅವರು ವಾಮಮಾರ್ಗದ ಮೂಲಕ‌ ಅಧಿಕಾರ ಹಿಡಿದಿರುವ ಬಿಜೆಪಿ ಈ ಆಟ ಬಹಳ ದಿನ ನಡೆಯುವುದಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ‌ ಆಯ್ಕೆಯಾದ ನಿರ್ದೇಶಕರನ್ನು ಕಾನೂನು ಬಾಹಿರವಾಗಿ‌ ಅನರ್ಹಗೊಳಿಸಿ ಗದ್ದುಗೆ ಹಿಡಿದ ಕ್ರಮ ನಿಜಕ್ಕೂ ತತ್ವ ಸಿದ್ದಾಂತ ರಹಿತ ರಾಜಕಾರಣಕ್ಕೊಂದು‌ ಉದಾಹರಣೆ.

ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟ್ವಿಟ್ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button