ಪ್ರಮುಖ ಸುದ್ದಿ

ಬಂಜಾರ ಸಮುದಾಯದ ಮೀಸಲಾತಿ‌ ತಪ್ಪಿಸಲ್ಲ-ಡಿಸಿಎಂ ಅಭಯ

 

ಚಿಂಚೋಳಿಃ ಬಂಜಾರ ಸಮುದಾಯಕ್ಕೆ ಈಗಿರುವ ಮೀಸಲಾತಿ ಸೌಲಭ್ಯ ಯಾವುದೇ ಕಾರಣಕ್ಕೆ ತಪ್ಪಿಸುವುದಿಲ್ಲ ಅದು ಮುಂದುವರೆಯಲಿದೆ. ನೀವು ಬಿಜೆಪಿಯವರ ಹೇಳುವ ಸುಳ್ಳು ಮಾತುಗಳನ್ನು ನಂಬಬೇಡಿ ಎಂದು‌ ಡಿಸಿಎಂ ಡಾ ಜಿ ಪರಮೇಶ್ವರ ಮನವಿ ಮಾಡಿದರು.

ಚಿಂಚೋಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು,

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ 14,000 ಮನೆ ಕಟ್ಟಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ 350 ಕೋಟಿ ಬಿಡುಗಡೆ ಮಾಡಿದ್ದಾರೆ. ಇದನ್ನು ಅಭಿವೃದ್ದಿ ಎನ್ನದೇ ಮತ್ತಿನ್ನೇನು ಅನ್ನಬೇಕು. ಬಿಜೆಪಿಯವರು ಏನು ಮಾಡಿದ್ದಾರೆ.ಯಡಿಯೂರಪ್ಪ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಉಮೇಶ್ ಜಾಧವ್ ಹೋಗಿದ್ದಕ್ಕೆ ರಾಠೋಡ್ ಕೂಡಾ ಪಕ್ಷ ಬಿಟ್ಟು ಹೋಗಬಹುದಾ ? ಎನ್ನುವ ಅನುಮಾನ ನನಗೆ ಬಂದಿತ್ತು. ಕಾರಣ ಇಷ್ಟೆ, ಜಾಧವ್ ಮಾಡಿದ್ದರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ. ಅವರಿಗೆ ನೀವು ಆಶೀರ್ವದಿಸಬೇಕಾ? ಎಂದರು.

ಬೇರೆ ಪಕ್ಷದವರನ್ನು ಸೆಳೆಯುವುದರಲ್ಲಿ ಬಿಎಸ್ ವೈ ಎಕ್ಸಪರ್ಟ್, ಜಾಧವ್ ನನ್ನು ಹಾಗೆ ಸೆಳೆಯಲಾಗಿದೆ ಎಂದ ಪರಮೇಶ್ವರ ಅವರು ರಾಠೋಡ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಚಿಂಚೋಳಿ ಮತಕ್ಷೇತ್ರದ ಬಂಜಾರ ಸಮುದಾಯ ತಾಂಡಾಗಳ ಅಭಿವೃದ್ದಿಗಾಗಿ‌ ಸಚಿವ ಪ್ರಿಯಾಂಕ್ ಖರ್ಗೆ ಒಂದು ಯೋಜನೆ ರೂಪಿಸಿದ್ದಾರೆ. ಅದು ನೂರು ಕೋಟಿ ಆಗಲಿ‌ ಸಾವಿರ ಕೋಟಿ ಆಗಲಿ ಅನುಷ್ಠಾನ ಗೊಳಿಸುವ  ಭರವಸೆ ನೀಡಿದರು.

ಕಾಂಗ್ರೇಸ್ ಪಕ್ಷದ ಎಲ್ಲ ಕಾರ್ಯಕ್ರಮಗಳನ್ನ ಮೈತ್ರಿ ಸರಕಾರ ಮುಂದುವರೆಸಿಕೊಂಡು ಹೋಗುತ್ತದೆ ಎಂದ ಡಿಸಿಎಂ, ಯಾವ ಕಾರಣಕ್ಕೆ ಸರಕಾರ ಬೀಳುವುದಿಲ್ಲ.‌ ನಮ್ಮ 22 ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂದು ಬಿಎಸ್ ವೈ ಹೇಳುತ್ತಾರೆ, ಅವರ ಎಷ್ಟು ಶಾಸಕರ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ ಗೊತ್ತಾದರೆ ಶಾಕ್ ಗೆ ಒಳಗಾಗುತ್ತಾರೆ.

ಮತ್ತೆ ಸಿಎಂ ಆಗುವ ಆಸೆ ಬಂದ ಮೇಲೆ ಅವರು ಏನೇನೋ ಮಾತನಾಡುತ್ತಿದ್ದಾರೆ ಅವರು ಮಾನಸಿಕ ಸ್ಥೀಮಿತ ಕಳೆದುಕೊಂಡಂತೆ ಕಾಣುತ್ತದೆ ಎಂದು ಟೀಕಿಸಿದರು.

ವೇದಿಕೆಯ ಮೇಲೆ, ಸಚಿವರಾದ, ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ ನಾಯಕ್, ರಹೀಂಖಾನ್, ಶಾಸಕರಾದ ಎಚ್ ಟಿ‌ ಸೋಮಶೇಖರ್, ಅಜಯ್ ಸಿಂಗ್ ಕೈಲಾಶ್ ನಾಥ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚವ್ಹಾಣ್, ಮಾಜಿ‌ ಶಾಸಕಿ ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button