ರವಿವಾರ ಶಹಾಪುರಕ್ಕೆ ಡಿಸಿಪಿ ರವಿ ಚನ್ನಣ್ಣನವರ್
ವೀರ ಯೋಧರಿಗೊಂದು ನಮನ ವಿಶೇಷ ಕಾರ್ಯಕ್ರಮ
ಯಾದಗಿರಿ, ಶಹಾಪುರಃ ನಗರದ ಕುಂಬಾರ ಓಣಿ ಹಿರೇಮಠದಲ್ಲಿ ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ರವಿವಾರದ ವೀರ ಯೋಧರಿಗೊಂದು ನಮನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಕಂಡ ದಕ್ಷ ಅಧಿಕಾರಿ ಡಿಸಿಪಿ ರವಿ ಚನ್ನಣ್ಣನವರ್ ಭಾಗವಹಿಸಲಿದ್ದು, ಸರ್ವರೂ ಪಾಲ್ಗೊಳ್ಳಬೇಕೆಂದು ಶ್ರೀಮಠದ ಸೂಗುರೇಶ್ವರ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿವಾರ ಅ.14 ರಂದು ಸಂಜೆ 6:00 ಗಂಟೆಗೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ (ಹಳೆ ಬಸ್ ನಿಲ್ದಾಣ ಎದುರು) ನಡೆಯಲಿರುವ ಕಾರ್ಯಕ್ರಮದಲ್ಲಿ ಚನ್ನಣ್ಣನವರು ವಿಶೇಷವಾಗಿ ಯುವ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಇದೇ ಸಂದರ್ಭದಲ್ಲಿ ಹುತಾತ್ಮ ವೀರ ಯೋಧರ ಕುಟುಂಬಗಳಿಗೆ ಸನ್ಮಾನ ಹಾಗೂ ನಿವೃತ್ತಿ ಯೋಧರಿಗೂ ಸನ್ಮಾನಿಸಿ ಗೌರವಿಸಲಾಗುತ್ತಿದೆ.
ಸಾರ್ವಜನಿಕರು ಭಾಗವಹಿಸಿ ಅವರ ಸೇವೆಗೆ ಪ್ರೋತ್ಸಾಹ ಗೌರವ ನೀಡುವ ಜೊತೆಗೆ ಹುತಾತ್ಮ ಯೋಧರ ಕುಟುಂಬಕ್ಕೆ ಶುಭಾಆರೈಕೆ ಜೊತೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದ್ದು, ತಮ್ಮೆಲ್ಲರ ಆಗಮನ ಅಗತ್ಯವಿದೆ ಎಂದು ಶ್ರೀಮಠದ ಭಕ್ತ ವೃಂದ ಮನವಿ ಮಾಡಿದೆ.