ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪಗಿಲ್ಲಃ ಸಿ.ಎಂ.ಸಿದ್ರಾಮಯ್ಯ
ಬೀದರಃ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದು ಸಿಎಂ ಕುರ್ಚಿ ಕಳೆದುಕೊಂಡ ಯಡಿಯೂರಪ್ಪನವರಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟತೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ರಾಮಯ್ಯ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಬಸವಕಲ್ಯಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆ ನೆರವೇರಿಸಿ ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಎರಡು ನಾಲಿಗೆ ಇವೆ. ಕೆಜೆಪಿಯಲ್ಲಿದ್ದಾಗ ಟಿಪ್ಪು ಸುಲ್ತಾನ ಓರ್ವ ದೇಶ ಪ್ರೇಮಿ ಎಂದು ಹೊಗಳಿದ್ದರು. ಇಂದು ಟಿಪ್ಪು ದೇಶ ದ್ರೋಹಿ ಎನ್ನುತ್ತಿದ್ದಾರೆ. ಸುಳ್ಳು ಹೇಳುವದರಲ್ಲಿ ಯಡಿಯೂರಪ್ಪ ನಿಪುಣ ಎಂದು ಕುಟುಕಿದರು.
ನಾನು ಬಸವಣ್ಣನವರ ಅಪ್ಪಟ ಅಭಿಮಾನಿ ಎಂದ ಅವರು, ಬಸವೇಶ್ವರರ ಬಗ್ಗೆ ಮಾತನಾಡುವವರು ಬಸವಣ್ಣನವರ ಕರ್ಮಭೂಮಿ ಅಭಿವೃದ್ಧಿ ಮಾಡಲಿಲ್ಲ. ಅಲ್ಲದೆ ದೇಶದ ಪ್ರಧಾನಿ ಮೋದಿಯವರು ಬೀದರಗೆ ಬಂದಾಗಿ ಬಸವಣ್ಣನವರ ಬಗ್ಗೆ ಸ್ಮರಣೆ ಸಹ ಮಾಡದೆ ಹಿಂದುರಿಗಿರುವುದು ದುರ್ದೈವದ ಸಂಗತಿ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ರಾಜ್ಯ ಲೂಟಿ ಹೊಡೆದು ಹೀಗ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಅಧಿಕಾರದಲ್ಲಿದ್ದ ಸಂದರ್ಭ ಒಂದೇ ಒಂದು ದಿನ ದಲಿತ ಬಗ್ಗೆ ಕಾಲಜಿವಹಿಸದ ಇವರು ಇಂದು ದಲಿತರ ಬಗ್ಗೆ ಮಾತನಾಡುತ್ತಿದ್ದಾರೆ.
ಬಿಜೆಪಿಯವರು ಹತಾಶರಾಗ ಏಕವಚನದಲ್ಲಿ ಮಾತನಾಡುವದನ್ನು ರೂಢಿಸಿಕೊಂಡಿದ್ದಾರೆ. ನಾವು ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಲು ಶ್ರಮಿಸುತ್ತಿದ್ದೇವೆ. ರಾಜ್ಯದ ಪ್ರತಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಆರಂಭ ಮಾಡುತ್ತಿದ್ದೇವೆ.
ಪ್ರಧಾನಿ ಮೋದಿಯವರು ಅಚ್ಛೆ ದಿನ್ ಅಂತಿದ್ದಾರೆ ಅಚ್ಛೆ ದಿನ್ ಯಾರಿಗೆ ಬಂದಿದೆ ಎಂದು ಗೊತ್ತಾಗಿದೆ. ಸಿರವಂತ ಅಂಬಾನಿಯಂತವರಿಗೆ ಅಚ್ಛೆದಿನ್ ಬಂದಿದೆ. ರೈತರಿಗೆ ಬಡವರಿಗೆ ದೀನ ದಲಿತರಿಗಲ್ಲ ಎಂದರು.