ಪ್ರಮುಖ ಸುದ್ದಿ
ಸಾಲ ಬಾಧೆ: ಬಾವಿಗೆ ಜಿಗಿದು ಆತ್ಮಹತ್ಯೆ
ಕುರಿ ಸಾಕಾಣಿಕೆಯಲ್ಲಿ ನಷ್ಟ, ಸಾಲಬಾಧೆ
ಕಲಬುರಗಿ: ಕುರಿ ಸಾಕಾಣಿಕೆಯಲ್ಲಿ ನಷ್ಟವಾದ ಕಾರಣ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನರಸಪ್ಪ ಪೂಜಾರಿ (27) ಬಾವಿಗೆ ಜಿಗಿದು ಆತ್ಮಹತ್ಯೆ
ಮಾಡಿಕೊಂಡ ಯುವಕ.
ಈತ ಹಲವು ವರ್ಷಗಳಿಂದ ಕುರಿ ಸಾಗಾಣಿಕೆ ಮಾಡಿಕೊಂಡು ಬರುತ್ತಿದ್ದ, ಸುಮಾರು 2 ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ.
ಸಾಲ ಬಾಧೆ ತಾಳಲಾರದ ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.