ಪ್ರಮುಖ ಸುದ್ದಿ

ದೆಹಲಿ ಗಲಭೆಗೆ ಹಣಕಾಸು ನೆರವು ನೀಡಿದ ಮೂವರ ಬಂಧನ-ಅಮಿತ್ ಶಾ

ದೆಹಲಿ‌‌ ಗಲಭೆಃ ಯಾರೊಬ್ಬರನ್ನು‌ ಬಿಡುವದಿಲ್ಲ – ಅಮಿತ್ ಶಾ

ನವದೆಹಲಿಃ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನು‌ ಸುಮ್ಮನೆ ಬಿಡುವದಿಲ್ಲ. ಇದುವರೆಗೆ‌ ಪೊಲೀಸರು 700 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗುಡುಗಿದ್ದಾರೆ.

ಬುಧವಾರ ಲೋಕಸಭೆಯಲ್ಲಿ ದೆಹಲಿ ಗಲಭೆ ಕುರಿತು ವಿರೋಧ ಪಕ್ಷದವ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಬದಿಯ ಗಲಭೆಕೋರರಿಗೆ ತಕ್ಕ ಶಿಕ್ಷೆಯಾಗುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗಲಭೆಯಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ ಅವರು, ಫೆ.25 ರ ನಂತರ ಯಾವುದೇ ಗಲಭೆ ಘಟನೆಗಳು ವರದಿಯಾಗಿಲ್ಲ.
ಆದರೆ‌ ಉತ್ತರ ಪ್ರದೇಶದಿಂದ 300 ಗಲಭೆಕೋರರು ಬಂದಿದ್ದರು ಎಂಬುದು ತಿಳಿದು ಬಂದಿದೆ. ಸರ್ಕಾರದ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಆಂತರಿಕ ಫೇಸ್ ರೆಕಗ್ನಿಶನ್ ಸಾಫ್ಟ್ ವೇರ್ ಅನ್ನು ಬಳಸುವ ಮೂಲಕ‌ ಪತ್ತೆ ಮಾಡುತ್ತಿದ್ದಾರೆ. ಇದು ಯೋಜಿತ ಪಿತೂರಿ ನಡೆದಿದ್ದು, ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ದಂಗೆ ನಡೆಸಲು ಹಣಕಾಸು ಒದಗಿಸಿರುವ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button