ಪ್ರಮುಖ ಸುದ್ದಿ
ದೇವಾಪುರ ಬಳಿ ಹೆದ್ದಾರಿಗೆ ನುಗ್ಗಿದ ಕೃಷ್ಣೆ,! ಬೀದರ-ಬೆಂಗಳೂರ ಸಂಚಾರ ಸ್ಥಗಿತ
ಬೀದರ-ಬೆಂಗಳೂರ ರಸ್ತೆ ಸಂಚಾರ ಸ್ಥಗಿತ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮ ಬಳಿ ಹೆದ್ದಾರಿ ಆವರಿಸಿಕೊಂಡ ಕೃಷ್ಣಾ ನದಿ ನೀರಿನಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇದು ಬೀದರ-ಬೆಂಗಳೂರ ಮಾರ್ಗವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡ ಪರಿಣಾಮ ಜನರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್ ಮರಳಬೇಕು.
ಪ್ರವಾಹ ಇಳಿ ಮುಖವಾಗುವವರೆಗೂ ಜನರು ಎಚ್ಚರಿಕೆಯಿಂದ ಸಂಚಾರ ಮಾಡಬೇಕು ಎಂದ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹೊಂಬ ಸಾಹಸಕ್ಕೆ ಕೈಹಾಕದೇ ಯಾರೊಬ್ಬರು ನದಿ ತೀರ ತೆರಳದಂತೆ ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ.
ಸಾರ್ವಜನಿಕರು ಸಹಕಾರ ನೀಡಬೇಕು. ನದಿ ನೀರನ್ನು ತೆರಳುವವರು ಎಚ್ಚರಿಕೆಯಿಂದ ಹುಚ್ಚು ಸಾಹಸಕ್ಕೆ ಇಳಿಯದಿರಿ ಎಂದು ತಾಲೂಕು ಆಡಳಿತ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ.