ಪ್ರಮುಖ ಸುದ್ದಿ

ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಭೇಟಿಯಾದ ದೇವೇಗೌಡ : ಹೆಚ್​ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ

ನವದೆಹಲಿ : ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ,ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ಮಾಡಿದ್ದಾರೆ. ಮೋದಿ ಭೇಟಿಗೆ ದೇವೇಗೌಡರು ವೀಲ್​ಚೇರ್​ನಲ್ಲಿ ಬಂದಿದ್ದು ವಿಶೇಷ. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು. ಹೆಚ್​ಡಿ ದೇವೇಗೌಡರು ನೀಡಿದ ಕಲಾಕೃತಿಗೆ ಮೋದಿ ಫಿದಾ ಆಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ, ದೇವೇಗೌಡರು ಭೇಟಿಯಾದದ್ದು ಗೌರವದ ಸಂಗತಿ. ವಿವಿಧ ವಿಷಯಗಳ ಬಗ್ಗೆ ಅವರ ಜಾಣ್ಮೆ ಮತ್ತು ದೃಷ್ಟಿಕೋನ ಆಳವಾಗಿದ್ದು, ಮೌಲ್ಯಯುತವಾದುದ್ದಾಗಿದೆ. ನನಗೆ ಕಲಾಕೃತಿಯೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿ ನೆನಪಿಸಿದ ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button