ಹೆಚ್.ಡಿ.ದೇವೇಗೌಡರು ನಾನಿನ್ನು ಮೂರ್ನಾಲ್ಕು ವರ್ಷ ಬದುಕಿರುತ್ತೇನೆ ಅಂದದ್ದೇಕೆ!
ಮೈಸೂರು: ನಾನಿನ್ನು ಮೂರು ವರ್ಷವೋ, ನಾಲ್ಕು ವರ್ಷವೋ ಬದುಕಿರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ನಂಜನಗೂಡು ಪಟ್ಟಣದಲ್ಲಿ ನಡೆದ ಜೆಡಿಎಸ್ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ದೊಡ್ಡಗೌಡರು ನಾನಿನ್ನು ಮೂರ್ನಾಲ್ಕು ವರ್ಷ ಬದುಕಿರುತ್ತೇನಷ್ಟೆ ಎಂದಿದ್ದು ಕಾರ್ಯಕರ್ತರು ಮೌನಕ್ಕೆ ಶರಣಾಗುವಂತೆ ಮಾಡಿತು.
ಮಾತು ಮುಂದುವರೆಸಿದ ದೇವೇಗೌಡರು ಚಿಕ್ಕಂದಿನಲ್ಲಿ ನನಗೆ ಕಿವಿ ಕೇಳುತ್ತಿರಲಿಲ್ಲ. ಆಗ ನಮ್ಮಪ್ಪ , ಅಮ್ಮ ನಂಜನಗೂಡಿಗೆ ಕರೆತಂದು ನಂಜುಂಡೇಶ್ವರನಿಗೆ ಮುಡಿ ಕೊಟ್ಟಿದ್ದರು. ಆಗಿನಿಂದ ಈಗಿನವರೆಗೂ ನಂಜುಂಡೇಶ್ವರನನ್ನು ನಂಬಿದ್ದೇನೆ. ಅಂತೆಯೇ ಇಲ್ಲಿನ ಜನರ ಮೇಲೆಯೂ ನನಗೆ ಅಷ್ಟೇ ನಂಬಿಕೆ ಇದೆ ಅಂದಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಮೈಸೂರು ಹಾಗೂ ಚಾಮರಾಜನಗರದ ಚುನಾವಣಾ ಉಸ್ತುವಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ. ಇಲ್ಲೇ ಮೊಕ್ಕಾಂ ಹೂಡಿ ನಮ್ಮ ಅಬ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇನೆಂದಿದ್ದಾರೆ.