ಪ್ರಮುಖ ಸುದ್ದಿ

ಧರ್ಮಸ್ಥಳ‌ ಸುಕ್ಷೇತ್ರಃ ಜನ್ಮಿಸಿದ ಆನೆ‌ ಮರಿಗೆ ಧರ್ಮಾಧಿಕಾರಿ ಇಟ್ಟ ಹೆಸರೇನು ಗೊತ್ತಾ.?

ಧರ್ಮಸ್ಥಳ‌ ಸುಕ್ಷೇತ್ರಃ ಜನ್ಮಿಸಿದ ಆನೆ‌ ಮರಿಗೆ ಧರ್ಮಾಧಿಕಾರಿ ಇಟ್ಟ ಹೆಸರೇನು ಗೊತ್ತಾ.?

ಧರ್ಮಸ್ಥಳಃ ಧರ್ಮಸ್ಥಳದ ಶ್ರೀ ಮಂಜುನಾಥ‌ ಪುಣ್ಯಕ್ಷೇತ್ರ ಎಲ್ಲರಿಗೂ ಚಿರಪರಿಚಿತ, ನಾಡಿನ ಪ್ರಮುಖ ‌ಕ್ಷೇತ್ರಗಳಲ್ಲಿ ಇದುವೊಂದು.‌ ಇಂತಹ ಕ್ಷೇತ್ರದಲ್ಲಿ ನಡೆಯುವ ಜಾತ್ರೆ, ಶ್ರೀದೇವರ ಮೆರವಣಿಗೆ ಉತ್ಸವ ಇತ್ಯಾದಿ ಸಾಂಸ್ಕೃತಿಕ, ‌ಧಾರ್ಮಿಕ‌ ಕಾರ್ಯಕ್ರಮಗಳಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿರುವ ಲತಾ ಮತ್ತು ಲಕ್ಷ್ಮೀ ಎಂಬ ಎರಡು ಆನೆಗಳಿವೆ.

ಹಲವಾರು ವರ್ಷಗಳಿಂದ‌ ಇಲ್ಲಿ ಗಜರಾಜನ ಸೇವೆ ನಡೆಯುತ್ತಿದೆ. ಅಂತೇಯೇ ಕಳೆದ ವರ್ಷದಲ್ಲಿ‌ ಶ್ರೀಮಠ ಲಕ್ಷ್ಮೀ ಎಂಬ ಆನೆಯನ್ನು ಮರಿ ಹಾಕುವಂತಾಗಲಿ ಎಂಬ ಕಾರಣಕ್ಕೆ ಅದನ್ನು ಗಂಡು ಆನೆಯೊಂದಿಗೆ ಬನ್ನೇರುಘಟ್ಟ ದಲ್ಲಿ‌ ಬಿಡಲಾಗಿತ್ತು ಎಂದು ಶ್ರೀಮಠದ ವೀರೇಂದ್ರ ಹೆಗಡೆ ತಿಳಿಸಿದ್ದಾರೆ.

ಗರ್ಭಧರಿಸಿದ ಆನೆ ಮಾಹಿತಿ ಪ್ರಕಾರ‌ ಎರಡು ವರ್ಷ ಎರಡು ತಿಂಗಳಿಗೆ ಅದು ಮರಿಹಾಕುತ್ತದೆ ಎನ್ನಲಾಗಿದೆ.
ಇದೀಗ ಇಲ್ಲಿನ ಲಕ್ಷ್ಮೀ ಆನೆ‌ ಹೆಣ್ಣು ಮರಿಯನ್ನು ಹಾಕಿದ್ದು,‌ ಅದರ ಹೆಸರನ್ನು ಇಡಲು ಸಾಂಪ್ರದಾಯಿಕ‌ ವಿಧಿ ವಿಧಾನ ಪ್ರಕಾರ‌ ಕಾರ್ಯಕ್ರಮ ಆಯೋಜಿಸಿ‌ ಶ್ರೀಮಠದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು, ಆ ಆನೆ‌ ಮರಿಗೆ “ಶಿವಾನಿ” ಎಂದು ಹೆಸರಿಟ್ಟಿದ್ದಾರೆ.

ಸಾಕು ಆನೆಗಳು ಮರಿಹಾಕಿರುವದು ಇದೇ ಮೊದಲು ಇದೊಂದು ವಿಶೇಷತೆ, ಶ್ರೀಮಠಕ್ಕೆ ಹೊಸ ಅತಿಥಿ‌ ಸೇರ್ಪಡೆಯಾಗಿದೆ. ಆನೆ ಮರಿಗೆ ಬೇಕಾದ ವೈದ್ಯಕೀಯು ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.

ಶಿವ ಮಂಜುನಾಥನ ಸನ್ನಿಧಿಯಲ್ಲಿ ಜನ್ಮವಿತ್ತ ಆನೆ‌ ಮರಿ, ಶಿವನ‌ ಜೊತೆಗೆ ವಾಸ ಮಾಡುವದರಿಂದ ಇದಕ್ಕೆ ಶಿವಾನಿ ಎಂದು ಹೆಸರಿಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button