ಪ್ರಮುಖ ಸುದ್ದಿಬಸವಭಕ್ತಿ

ಸಾಮೂಹಿಕ ಪೂಜೆಯಲ್ಲಿದೆ ಮಹಾ ಶಕ್ತಿ – ಬಸವಯ್ಯ ಶರಣರು

ಧರ್ಮಸ್ಥಳ ಬ್ಯಾಂಕಿನಿಂದ ಸಾಮೂಹಿಕ ಪೂಜಾ ಕಾರ್ಯಕ್ರಮ

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಶಹಾಪುರಃ ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದು, ಅವರ ಅವರ ಸಂಪ್ರದಾಯದಂತೆ ಧಾರ್ಮಿಕ ಆಚರಣೆಯನ್ನು ಮಾಡುವದರ ಜೊತೆಗೆ ಸಾಮೂಹಿಕವಾಗಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು ತಿಳಿಸಿದರು.

ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ವರ ಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಯೋಜನಾ ಸಂಸ್ಥೆಯಿಂದ ನಾಡಿನ ಅಭಿವೃದ್ಧಿಗೆ ಬೇಕಾದ ಸಾಕಷ್ಟು ಕೆಲಸ ಕಾಂiÀರ್iಗಳನ್ನು ಮಾಡಿದ್ದಾರೆ. ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಯಾಗಿ ಬದುಕಲು ಹಲವಾರು ಕೌಶಲ್ಯ ತರಬೇತಿ ನೀಡಿ, ಬ್ಯಾಂಕಿನಿಂದ ಸಾಲ ನೀಡಿ ಸ್ವಯಂ ಉದ್ಯೋಗ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದ ಜೊತೆಗೆ ಮಾರ್ಗೋಪಾಯವನ್ನು ತಿಳಿಸಿಕೊಟ್ಟಿದ್ದಾರೆ. ನಿಜಕ್ಕೂ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ.

ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಇದರಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿ ಪ್ರಾರ್ಥನೆ ಸಲ್ಲಿಕೆಯಲ್ಲಿದೆ ಮಹಾನ್ ಶಕ್ತಿ ಎಂದರು.

ಸಿಪಿಐ ಹನುಮರಡ್ಡೆಪ್ಪ ಮಾತನಾಡಿ, ಧರ್ಮಸ್ಥಳ ಬ್ಯಾಂಕಿನಿಂದ ಸುಮಾರ 22 ಸಾವಿರ ಜನರು ಸದುಪಯೋಗ ಪಡೆದುಕೊಂಡಿರುವದು ಶ್ಲಾಘನೀಯ. ತಾಲೂಕಿನಲ್ಲಿ 2400 ಸಂಘಗಳು ಈ ಬ್ಯಾಂಕಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವದು ನಿಜಕ್ಕೂ ಮಹಾನ್ ಸಾಧನೆ.

ಅಲ್ಲದೆ ವಿಕಲಚೇತನರಿಗೆ ವಾಹನಗಳ ವಇತರಣೆ, ಹಲವು ಶಾಲೆಗಳಿಗೆ ಬೆಂಚ್ ವಿತರಣೆ, ಕೆರೆ ಹೂಳೆತ್ತುವದು, ಕುಡಿಯುವ ನೀರು ಸರಬರಾಜು, ಬಡವರಿಗೆ ಮಾಸಾಶನ ಇವೆಲ್ಲ ಸರ್ಕಾರ ಮಾಡದ ಕೆಲಸ ಕಾರ್ಯಗಳನ್ನು ಧರ್ಮಾಧಿಕಾರಿಗಳ ಜನಪರ ಕಾರ್ಯಕ್ರಮಗಳು ಮಹತ್ವವಾದದು. ಮಹಿಳೆಯರು ಇಲ್ಲಿ ಜಾಸ್ತಿ ಜನ ಭಾಗವಹಿಸಿದ್ದೀರಿ ಸಂತಸದ ವಿಚಾರ.

ಎಲ್ಲರೂ ಕಾನೂನಿ ಜ್ಞಾನವನ್ನು ಪಡೆಯಬೇಕು. ಅಲ್ಲದೆ ನಿಮ್ಮ ಮನೆಯಲ್ಲಿರುವ ಗಂಡು ಮಕ್ಕಳಿಗೆ ಹೆಲ್ಮೆಟ್ ಧರಿಸಿ ಬೈಕ್ ಓಡಿಸಲು ತಿಳಿ ಹೇಳಬೇಕು ಎಂದು ಮನವಿ ಮಾಡಿದರು. ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ ಎಂದರು. 401 ಜನ ಮಹಿಳೆಯರು ಸಾಮೂಹಿಕ ಪೂಜೆಯಲ್ಲಿ ಭಾಗವಹಿಸಿದ್ದರು.

ಮುಖಂಡರಾದ ಚಂದ್ರಶೇಖರ ಆರಬೋಳ್, ಮಾಜಿ ಪುರ ಸಭೆ ಅಧ್ಯಕ್ಷೆ ರೇಣುಕಾ ಚಟ್ರಿಕಿ,
ಪತ್ರಕರ್ತ ನಾರಾಯಣ ಸಗರ, ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ನಾಗರಾಜ ದೇಶಮುಖ ಸೇರಿದಂತೆ ಉಕ ಕರವೇ ಅಧ್ಯಕ್ಷ ಶರಣು ಗದ್ದುಗೆ ಉಪಸ್ಥಿತರಿದ್ದರು. ಯೋಜನಾಧಿಕಾರಿ ನಾಗರಾಜ.ಎಚ್ ಸ್ವಾಗತಿಸಿದರು. ಮೇಲ್ವಿಚಾರಕ ತೀರ್ಥರಾಜ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಶಿವಲಿಂಗಮ್ಮ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button