ಪ್ರಮುಖ ಸುದ್ದಿ

ಕುಟುಂಬ ನಿರ್ವಹಣಾ ಜಾಣ್ಮೆಗೆ ಜ್ಞಾನ ವಿಕಾಸ ಕಾರ್ಯಕ್ರಮ ಪೂರಕ:

ಶ್ರೀಕ್ಷೇತ್ರ ಧರ್ಮಸ್ಥಳ ಜ್ಞಾನಾಭಿವೃದ್ಧಿ ಯೋಜನೆ

ಶಹಾಪುರ: ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ಜಾಣ್ಮೆ ಹಣಕಾಸು, ವ್ಯವಹಾರ ಜ್ಞಾನ, ಮಕ್ಕಳ, ಶಿಕ್ಷಣ ಮತ್ತು ಪೌಷ್ಠಿಕ ಆಹಾರ ವಯಕ್ತಿಕ ಶುಚಿತ್ವ, ಪರಿಸರ ಕಾಳಜಿ ಸೇರಿದಂತೆ ಸೂಕ್ತ ಮಾಹಿತಿ ಮತ್ತು ಅವುಗಳ ಅನುಷ್ಠಾನಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ಸೌಲಭ್ಯಗಳ ಬಳಕೆಗೆ ಅತ್ಯಂತ ಪೂರಕವಾಗಿದೆ ಎಂದು ತಾಲೂಕಾ ಯೋಜನಾಧಿಕಾರಿ ನಾಗರಾಜ ಹದ್ಲಿ ತಿಳಿಸಿದರು.

ಇಲ್ಲಿನ ಭೀಮರಾಯನ ಗುಡಿ ವಲಯದ ಶಾಂಭವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮೇಳ ಮತ್ತು ದುರ್ಬಲರಿಗೆ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕು ಎನ್ನುವುದು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶಯವಾಗಿದ್ದು, ಅದರಲ್ಲಿಯೂ ದುರ್ಬಲ ವರ್ಗದವರು ಆರ್ಥಿಕವಾಗಿ ಸಬಲರಾಗಬೇಕು, ಸರ್ವರಿಗೂ ಆರೋಗ್ಯ ಭಾಗ್ಯ ದೊರಕಬೇಕು. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಲವಾರು ಯೋಜನೆ ಹಾಕಿಕೊಂಡಿದ್ದು, ನಾಡಿನಾದ್ಯಂತ ಗ್ರಾಮಾಭಿವೃದ್ಧಿ ಯೋಜನೆ ಕ್ರೀಯಾಶೀಲವಾಗಿದ್ದು, ಸರ್ವರಿಗೂ ಯೋಜನೆಗಳ ಫಲ ತಲುಪುತ್ತಿದೆ.

ಜ್ಞಾನವಿಕಾಸ ಕೇಂದ್ರದಿಂದ ತರಬೇತಿಗಳು ನಡೆದಿದ್ದು, ಕಾರ್ಯಕರ್ತರ ಪಡೆ ಕಾರ್ಯಕ್ರಮದ ಯಶಸ್ಸಿಗೆ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸೋಲಾರ ತರಬೇತಿದಾರ ಗುರುರಾಜ ಮಾತನಾಡಿ, ಮಕ್ಕಳ ಆರೋಗ್ಯ ಪೂರ್ಣ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹು ಮುಖ್ಯ, ಪ್ರತಿಯೊಬ್ಬರು ಉತ್ತಮ ಆಹಾರ ಬಳಕೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಹಲವು ದುರ್ಬಲ ಕುಟುಂಬಗಳನ್ನು ಗುರುತಿಸಿ ವಾತ್ಸಲ್ಯ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ನಿಂಗಯ್ಯ ಸ್ವಾಮಿ, ತರಬೇತುದಾರರಾದ ಹನೀಫ, ಮಲ್ಲಿಕಾರ್ಜುನ, ಜ್ಞಾನ ವಿಕಾಸ ಕಾರ್ಯಕ್ರಮದ ಸಾವಿತ್ರಿ ಉಪಸ್ಥಿತರಿದ್ದರು. ಬಡಾವಣೆಯ ಮಹಿಳೆಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button