ಪ್ರಮುಖ ಸುದ್ದಿ

ಚರಬಸವೇಶ್ವರ ಸಂಗೀತ ಭವನಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ೩ ಲಕ್ಷ ಸಹಾಯಧನ

ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನಿಯ - ಗದ್ದುಗೆ

ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನಿಯ – ಗದ್ದುಗೆ

 

ಚರಬಸವೇಶ್ವರ ಸಂಗೀತ ಭವನಕ್ಕೆ ೩ ಲಕ್ಷ ಸಹಾಯಧನ

ಶಹಾಪುರಃ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಲ್ಲಿ ಸ್ಥಳೀಯ ಚರಸಬವೇಶ್ವರ ಸಂಗೀತ ಭವನ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಪ್ರಸಾದ ರೂಪದಡಿ ೩ ಲಕ್ಷ ರೂ.ಡಿಡಿಯನ್ನು ಶ್ರೀಮಠದ ಗುರುಗಳಿಗೆ ಹಸ್ತಾಂತರಿಸುವದು ನನ್ನ ಸೌಭಾಗ್ಯವೆಂದು ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ ತಿಳಿಸಿದರು.

ನಗರದ ಶ್ರೀ ಚರಬಸವೇಶ್ವರ ದೇವಸ್ಥಾನದಲ್ಲಿ ಸಂಗೀತ ಭವನ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆಯಿAದ ಸಹಾಯಾರ್ಥವಾಗಿ ೩ ಲಕ್ಷ ಡಿಡಿ ಹಸ್ತಾಂತರಿಸಿ ಅವರು ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ನಮ್ಮೂರು ನಮ್ಮ ಕೆರೆ, ಸುಜ್ಞಾನ ನಿಧಿ, ಶಿಷ್ಯ ವೇತನ, ಜ್ಞಾನದೀಪ, ಹೈನುಗಾರಿಕೆಗೆ ಪೂರಕವಾಗಿ ಸಹಾಯಧನ ಒದಗಿಸುವದು ಸೇರಿದಂತೆ ನಿರ್ಗತಿಕರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ನಿರ್ಮಾಣ ಮತ್ತು ತೀರಾ ನಿರ್ಗತಿಕರಿಗೆ ಮಾಶಾಸನ ವಿತರಣೆ ಆಹಾರ ಧಾನ್ಯಗಳ ಕಿಟ್ ವಿತರಣೆ, ವಿಕಲಚೇತನರಿಗೆ ಸಲಕರಣೆ ಒದಗಿಸುವದು ಮತ್ತು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಅನುದಾನ ನೀಡುವಂತ ಕೆಲಸಗಳ ಜತೆಗೆ ಕುಡಿಯುವ ನೀರು ಕಲ್ಪಿಸುವದು ಸ್ತ್ರೀ ಸಬಲೀಕರಣದಂತಹ ಕೆಲಸಗಳನ್ನು ಮಾಡುತ್ತಾ ಬಂದಿದೆ.

ಈ ಮೂಲಕ ರಾಜ್ಯದ ಅಭಿವೃದ್ಧಿ ಪೂರಕ ಜನಪರ ಕಾಳಜಿವಹಿಸಿ ಸಂಸ್ಥೆ ಮಾಡುವ ಕೆಲಸ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

ಡಿಡಿ ಪಡೆದು ಮಾತನಾಡಿದ ಚರಬಸವೇಶ್ವರ ಸಂಸ್ಥೆಯ ಡಾ.ಶರಣು ಗದ್ದುಗೆ, ಧರ್ಮಸ್ಥಳ ಸಂಸ್ಥೆ ಮಾಡುವ ಸಮಾಜಮುಖಿ ಕೆಲಸಗಳು ಮೆಚ್ಚವಂತಹದ್ದು, ಯಾವುದೇ ಸರ್ಕಾರದಿಂದ ಆಗದಂತ ಕೆಲಸಗಳನ್ನು ಸಂಸ್ಥೆ ಮಾಡುವ ಮೂಲಕ ತನ್ನ ಮೌಲ್ಯವರ್ಧಿತ ಶಕ್ತಿಯನ್ನು ತೋರಿಸಿಕೊಟ್ಟಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಕಾರ್ಯವನ್ನು ಸಂಸ್ಥೆ ಮಾಡುತ್ತಿರುವದು ಶ್ಲಾಘನಿಯ ಎಂದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ನಿರ್ದೇಶಕ ಕಮಲಾಕ್ಷ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಅಮರೇಶ ಹಿರೇಮಠ, ನಗರಸಭೆ ಸದಸ್ಯ ಸತೀಶ ಪಂಚಭಾವಿ, ತಾಲೂಕು ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್, ಮೇಲ್ವಿಚಾರಕ ಶ್ರೀಕಾಂತ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button