ಪ್ರಮುಖ ಸುದ್ದಿ

“ಪರ್ ಡ್ರಾಪ್ ಮೋರ್ ಕ್ರಾಪ್ ” ಎಂಬ ಸಂಕಲ್ಪ ಅಗತ್ಯಃ ಮೋದಿ

ನಮೋ ಮಂಜುನಾಥ ಎಂದ ನಮೋ

ಡಿಜಿಟಲೀಕರಣಕ್ಕೆ ಗ್ರಾಮಾಭೀವೃದ್ಧಿ ಸಂಸ್ಥೆ ಸಹಕಾರ ಶ್ಲಾಘನೀಯ

ಧರ್ಮಸ್ಥಳಃ ಶಂಕರಾಚಾರ್ಯರು ಸ್ಥಾಪಿಸಿದ ಉತ್ತರದ ಕೇದಾರನಾಥ ಸ್ವಾಮಿ ಇಂದು ದಕ್ಷಿಣದ ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಸಮೀಪದ ಉಜಿರೆ ಗ್ರಾಮದಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಯೋಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೊದಲಿಗೆ ಕನ್ನಡದಲ್ಲಿ ಮಾತನಾಡಿ ಬಂಧು ಭಗಿನಿಯರಿಗೆ ಮತ್ತು ವಿಶೇಷವಾಗಿ ಸಹೋದರಿಯರಿಗೆ ಅಭಿನಂದನೆಗಳನ್ನು ತಿಳಿಸಿದರು. ಅಲ್ಲದೆ ನಮೋ ಮಂಜುನಾಥ ಎಂದು ಅವರ ಭಾಷಣ ಆರಂಭಿಸಿದರು.

ಮೊದಲಿಗೆ ಸಾಂಪ್ರದಾಯಿಕವಾಗಿ ಕ್ಷೇತ್ರಾಧಿಪತಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಉಜಿರೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 50 ವರ್ಷದಿಂದ ಸಾಮಾಜಿಕ ಜೀವನದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ. ಅವರ ಕೌಶಲ್ಯ ಅಭಿವೃದ್ಧಿ ತತ್ವವನ್ನೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಳವಡಿಸಿಕೊಳ್ಳಲಾಗಿದೆ. ಅವ ಮಾರ್ಗ ದರ್ಶನ ಅಗತ್ಯವಾಗಿದೆ.

ಅವರ 50 ವರ್ಷದ ತ್ಯಾಗ, ಶ್ರಮ ತಪ್ಪಸ್ಸಿನ ಮೂಲಕ ಅಗಾಧ ಸಾಧನೆ ಸಾಧಿಸಿದ್ದಾರೆ. ಅವರ ಮುಂದೆ ನಾನು ಬಹಳ ಚಿಕ್ಕವನು. ಇಂತಹ ಮಹಾನ್ ವ್ಯಕ್ತಿಗಳಿಂದ ನನಗೆ ಸನ್ಮಾನ ಬೇಡವೆಂದೆ, ಆದರೆ ದೇಶದ ಪರವಾಗಿ ಸನ್ಮಾನವನ್ನು ಸ್ವೀಕರಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧೀ ಯೋಜನೆ ಕಾರ್ಯ ಶ್ಲಾಘನೀಯವಾದದು. ಎಂದು ಅವರ ಗ್ರಾಮೀಣ ಭಾಗದ ಅಭಿವೃದ್ಧಿ ಕೌಶಲಯ್ ತರಬೇತಿ ಮಹಿಳೆಯರ ಸ್ವಾವಲಂಬಿ ಬದುಕಿಗಾದ ಆಸರೆ ಕುರಿತು ಸ್ಮರಿಸಿದರು.

ಅಲ್ಲದೆ ಡಿಜಿಟಲೀಕರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಕ್ಯಾಶ್ ಲೆಸ್ ಭಾರತ ಮಾಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಗ್ಗಡೆಯವರು ಡಿಜಿಟಲೀಕರಣಕ್ಕೆ ಪೂರಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಉತ್ತಮ ನಿರ್ಧಾರವಾಗಿದೆ. ಮಹಿಳೆಯರಿಗೆ ರೂಪೆ ಕಾರ್ಡ್ ವಿತರಿಸಿರುವುದು ಸಂತಸ ತಂದಿದೆ. ಈಗಾಗಲೇ ಜನ ಕ್ಯಾಶ್ ಲೆಸ್ ಬದುಕಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಇದರಿಂದ ಪ್ರಾಮಾಣಿಕ ವ್ಯವಹಾರ ನಡೆಯಲು ಸಾಧ್ಯವಿದೆ. ಯಾವುದೇ ಯೋಜನೆ ಹಣ ನೇರವಾಗಿ ಅರ್ಹರ ಖಾತೆಗೆ ಜಮೆಯಾಗುತ್ತದೆ.

ಮುಂಬುರವ ದಿನಗಳ ಪ್ರಾಮಾಣಿಕರದ್ದಾಗಿದೆ. ಅಪ್ರಾಮಾಣಿಕರಿಗೆ ಪಾಠ ಕಲಿಸಬೇಕಿದೆ. ಪ್ರಮಾಣಿಕರ ಶಕ್ತಿ ಒಗ್ಗೂಡಬೇಕಿದೆ. ಪ್ರಾಮಾಣಿಕ ಶಕ್ತಿಯಿಂದ ಮಾತ್ರ ದೇಶವನ್ನಯು ಪ್ರಾಮಾಣಿಕ ಪಥದಲ್ಲಿ ಯಾವುದೆ ಭ್ರಷ್ಟಚಾರ ರಹಿತವಾಗಿ ಕಟ್ಟಲು ಸಾಧ್ಯವಿದೆ. ಡಿಜಿಟಲ್ ಇಂಡಿಯಾದಿಂದ ಯಾವುದೆ ವಂಚನೆ, ಭ್ರಷ್ಟತೆ ನಡೆಯಲು ಸಾಧ್ಯವಿಲ್ಲ. ಅಲ್ಲದೆ ರೈತಾಪಿ ಜನರು ಬರುವ 2022 ಕ್ಕೆ ಯೂರಿಯಾ ಬಳಕೆಯಲ್ಲಿ ಅರ್ಧದಷ್ಟು ಕಡಿಮೆಗೊಳಿಸಬೇಕಿದೆ.

ನಮ್ಮ ಭೂಮಿ ಫಲವತ್ತತೆ ಕಾಪಾಡಬೇಕಿದೆ. ರಾಸಾಯನಿಕ ಔಷಧಿಗಳನ್ನು ಬೇಕಾ ಬಿಟ್ಟಿ ಬಳಸಿ ಭೂಮಿಯನ್ನು ಹಾಳು ಮಾಡಿದ್ದೇವೆ. ಆ ಕುರಿತು ನಾವೆಲ್ಲ ಯೋಚಿಸಬೇಕಿದೆ. ಅಲ್ಲದೆ ಹನಿ ಹನಿ ನೀರನ್ನು ಬಳಸುವ ಮೂಲಕ ಅತ್ಯಮೂಲ್ಯವಾದ ನೀರಿನ ಮೂಲ ಉಳಿಸಿಕೊಳ್ಳಬೇಖಕಿದೆ. ಆ ನಿಟ್ಟಿನಲ್ಲಿ “ಪರ್ ಡ್ರಾಪ್ ಮೋರ್ ಕ್ರಾಪ್ ” ಎಂಬ ಸಂಕಲ್ಪ ಮಾಡುವ ಮೂಲಕ ರೈತರು ನೀರಿನ ಸಂರಕ್ಷಣೆ ಮಾಡಬೇಕಿದೆ ಎಂದರು.

ನಾವೇ ಟಿಸ್ಮಾರ್ಕ್ ಅಂದ್ಕೊಂಡು ಹೇಳಿಕೆ ನೀಡುವವರಿಗೆ ಛಾಟಿ ಏಟು ನೀಡಿದ ಮೋದಿ

ಡಿಜಟಲೀಕರಣ, ನೋಟ್ ಅಮಾನ್ಯ ಬಗ್ಗೆ ತಾವೇ ದೊಡ್ಡ ಟೀಸ್ಮಾರ್ಕ್‍ಗಳೆಂದು ವಿರುದ್ಧ ಹೇಳಿಕೆ ನೀಡುವವರಿಗೆ ಮೋದಿಯವರು ತನ್ನದೆ ಶೈಲಿಯಲ್ಲಿ ಛಾಟಿ ಏಟು ನೀಡಿದರು. ತಾವೇ ಬುದ್ಧಿವಂತರು ಎಂದ್ಕೊಂಡು ಇಲ್ಲದ ಸಲ್ಲದ ಹೇಳಿಕೆ ನೀಡುವವರಿಗೆ ಪಾರದರ್ಶಕತೆ ವ್ಯವಹಾರ ಬೇಕಿಲ್ಲ.  ಅವರು ಬೆಳೆಸಿದ್ದ ಭ್ರಷ್ಟತೆಗೆ ಈಗ ಎಲ್ಲೂ ಜಾಗವಿಲ್ಲ ಆ ಕಾರಣಕ್ಕೆ ಅವರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ  ಎಂದು ಬಿಸಿ ಮುಟ್ಟಿಸಿದರು.

ಭಾರತದಲ್ಲಿ ಯಾವುದದೇ ಯೋಜನೆ ಇರಲಿ ಇನ್ಮುಂದೆ ಭ್ರಷ್ಟತೆಗೆ ಅವಕಾಶ ನೀಡುವದಿಲ್ಲ. ಡಿಜಟಲೀಕರಣದಿಂದ ನೋಟ್ ಅಮಾನ್ಯದಂತಹ ಮಹತ್ವದ ನಿರ್ಣಯದಿಂದ  ಭಾರತದ ಪ್ರಾಮಾಣಿಕತೆಯ ವ್ಯವಹಾರ ನಡೆಸುವ ಮೂಲಕ ಪ್ರಜ್ವಲಿಸಲಿದೆ.  ಎಲ್ಲಾ ವ್ಯವಹಾರದಲ್ಲಿ ಪಾರದರ್ಶಕತೆ ಇರುವದರಿಂದ ಯಾವುದೆ ವಂಚನೆ ಮೋಸ ಹಣ ಸುಲಿಯುವ ಕಾರ್ಯ ನಡೆಯುವದಿಲ್ಲ.

ನೋಟ್ ಅಮಾನ್ಯದಿಂದ ಅವರ ವಂಚನೆ ಭ್ರಷ್ಟತೆ ಕಾರ್ಯಕ್ಕೆ ಬಹು ದೊಡ್ಡ ಸವಾಲಾಗಿದೆ. ಹೀಗಾಗಿ ಅವರು ನೋಟ್ ಅಮಾನ್ಯ ಬಗ್ಗೆ ವಿರೋಧಿಸುತ್ತಿದ್ದಾರೆ. ಇನ್ಮುಂದೆ ಎಲ್ಲವೂ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ದುಷ್ಟಶಕ್ತಿ ಕ್ಷೀಣಿಸಿದೆ, ಅದರ ವಿರುದ್ಧ ಪ್ರಾಮಾಣಿಕ ಶಕ್ತಿ ಒಗ್ಗೂಡಿ ನಿಲ್ಲಬೇಕಿದೆ. ದುಷ್ಟಶಕ್ತಿಗೆ ಇನ್ನೂ ಜಾಗವಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button