ವಿನಯ ವಿಶೇಷ
ಸ್ವಾತಂತ್ರ್ಯೋತ್ಸವ : ಲಡಾಕ್ ನಲ್ಲಿ ಎಂ.ಎಸ್.ಧೋನಿ ರಾಷ್ಟ್ರ ಧ್ವಜಾರೋಹಣ?
ನವದೆಹಲಿ: ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ ಆಗಸ್ಟ್ 15 ರಂದು ಲೇಹ್ ಲಡಾಕ್ನಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಜುಲೈ 31ರಿಂದ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 106 ಟಿಎ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಧೋನಿ ಆಗಸ್ಟ್ 10ಕ್ಕೆ ಲೇಹ್ ಲಡಾಕ್ಗೆ ಪ್ರಯಾಣ ಬೆಳೆಸಲಿದ್ದಾರೆ. ಧೋನಿ ನಾಯಕತ್ವದಲ್ಲಿ 2011ರ ಏಕದಿನ ವಿಶ್ವಕಪ್ ಗೆದ್ದ ನಂತರ ಧೋನಿಗೆ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಸ್ಥಾನಮಾನ ನೀಡಿ ಗೌರವಿಸಿಲಾಗಿತ್ತು. ಇದೀಗ ಧೋನಿ ಲಡಾಕ್ ನಲ್ಲಿ ಧ್ವಜರೋಹಣ ಮಾಡಲಿದ್ದಾರೆ ಎನ್ನಲಾಗುತ್ತಿದ್ದು ಧೋನಿ ಅಭಿಮಾನಿಗಳು ಧೋನಿ ಧ್ವಜರೋಹಣ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.