ಪ್ರಮುಖ ಸುದ್ದಿ
ಸರಣಿ ಅಪಘಾತಃ ಬಸ್, ಲಾರಿ ಮತ್ತು ಕಾರು ನಡುವೆ ಡಿಕ್ಕಿ ಐವರು ಸಾವು
ಚನ್ನೈಃ ಚನ್ನೈನ ಸಂಬಂಧಿಕರ ಮನೆಗೆ ಹೋಗಿ ವಾಪಾಸ್ ಬೆಂಗಳೂರಿಗೆ ಮರಳುತ್ತಿರುವಾಗ ಸರಣಿ ಅಪಘಾತ ಸಂಭವಿಸಿದ್ದು, ಕಾರ್ ನಲ್ಲಿದ್ದ ಐವರು ಮೃತಪಟ್ಟಿದ್ದು ಬಸ್ ನಲ್ಲಿದ್ದ 15 ಜನರು ಗಾಯಗೊಂಡ ಘಟನೆ ನಡೆದಿದೆ.
ಕಾರ್ ನಲ್ಲಿದ್ದವರು ಬೆಂಗಳೂರ ಮೂಲದ ಲಕ್ಷ್ಮೀಪುರ ನಿವಾಸಿಗಳು ಎನ್ನಲಾಗಿದೆ. ಇದರಲ್ಲಿ ಆನಂದ ಎಂಬಾತ ಗಂಭೀರಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಳಗಿರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಚಾಲಕನ ನಿರ್ಲಕ್ಷದಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.