ಯೂತ್ ಐಕಾನ್
ಪ್ರತಿ ಕ್ರಿಕೆಟ್ ಸರಣಿ ವೇಳೆ ಎಮ್.ಎಸ್.ಧೋನಿ ಆ ಮಾತೆಯ ದರ್ಶನ ಪಡೆಯುತ್ತಾರೆ!
ಕ್ರಿಕೆಟಿಗ ಎಮ್.ಎಸ್.ಧೋನಿ ಪ್ರತಿ ಕ್ರಿಕೆಟ್ ಪಂದ್ಯಾವಳಿಯ ಸರಣಿ ಸಂದರ್ಭದಲ್ಲಿ ರಾಂಚಿಯ ಧಿಯೋರಿ ಸಮೀಪದ ದುರ್ಗಾ ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹನ್ನೊಂದನೇ ಆವೃತ್ತಿ ಐಪಿಎಲ್ ಟ್ರೋಫಿ ಗೆದ್ದ ನಂತರವೂ ಧೋನಿ ದುರ್ಗಾ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಧೋನಿ ನಾಯಕತ್ವದ ಟೀಮ್ ಸಿಎಸ್‌ಕೆ ಈಸಲ ಉತ್ತಮ ಪ್ರದರ್ಶನ ನೀಡಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಆ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಹೀಗಾಗಿ, ಧೋನಿ ಎಂದಿನ ಸಂಪ್ರದಾಯದಂತೆ ದುರ್ಗಾ ಮಂದಿರಕ್ಕೆ ಭೇಟಿ ದರ್ಶನ ಪಡೆದಿದ್ದಾರೆ.