Homeಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಗೃಹಿಣಿಯರಿಗೆ ಗುಡ್ ನ್ಯೂಸ್, ಈ ಜಿಲ್ಲೆಯವರಿಗೆ ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ: ಲಕ್ಷ್ಮಿ ಹೆಬ್ಬಾಳಕರ್

ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ, ಈ ಯೋಜನೆಯು ರಾಜ್ಯದ ಬಹುತೇಕ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದು, ಇದರ ಸದುಪಯೋಗವನ್ನು ಬಹಳಷ್ಟು ಮಹಿಳೆಯರು ಹಾಗು ಬಡ ಕುಟುಂಬಗಳು ಪಡೆದುಕೊಂಡಿವೆ, ಕಳೆದ 2 ತಿಂಗಳ ಹಣ ಮಹಿಳೆಯರಿಗೆ ಇನ್ನೂ ಪಾವತಿ ಆಗಿಲ್ಲ. ಆದ್ರೆ ಕೆಲವು ದಿನಗಳ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಕೆಲವೇ ದಿನಗಳಲ್ಲಿ ರಾಜ್ಯದ ಗೃಹಲಕ್ಷ್ಮಿಯರ ಖಾತೆಗೆ ಬಾಕಿ ಇರುವ ಹಣ ಜಮೆ ಆಗುತ್ತದೆ ಎಂಬುದಾಗಿ ತಿಳಿಸಿದ್ದರು.

ಹೌದು ಇದೀಗ ಬಾಕಿ ಇರುವ ಜೂನ್ ತಿಂಗಳ ಹಣವನ್ನು ವರಮಲಕ್ಷ್ಮಿ ಹಬ್ಬಕ್ಕೂ ಮುಂಚೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ, ಹೌದು ಈ ಜಿಲ್ಲೆಯ ಗೃಹಲಕ್ಷ್ಮಿಯರಿಗೆ ಹಣ ಪಾವತಿಯಾಗಲಿದೆ ಅಷ್ಟಕ್ಕೂ ಯಾವ ಜಿಲ್ಲೆಯವರಿಗೆ ಹಣ ಪಾವತಿಯಾಗಲಿದೆ ಅನ್ನೋದನ್ನ ಮುಂದೆ ತಿಳಿಸಲಾಗಿದೆ ನೋಡಿ.

ವರಮಹಾಲಕ್ಷ್ಮಿ, ನಾಗರ ಪಂಚಮಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಯಂತಹ ವಿವಿಧ ಹಬ್ಬಗಳಲ್ಲಿ ಮಹಿಳೆಯರು ವಿಶೇಷವಾಗಿ ಪ್ರಮುಖ ವಸ್ತುಗಳನ್ನು ಖರೀದಿಸುತ್ತಾರೆ. ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಸರ್ಕಾರದ ಹಣವನ್ನು ಅವಲಂಬಿಸಿದ್ದಾರೆ. ಈಗ, ಹಬ್ಬದ ಸಮಯದಲ್ಲಿ, ಸರ್ಕಾರವು 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿಯನ್ನು ತಿಳಿಸಿದೆ. ನಾಳೆಯಿಂದ 26.65 ಲಕ್ಷ ಅರ್ಹ ಮಹಿಳೆಯರ ಖಾತೆಗಳಿಗೆ ಜೂನ್ ತಿಂಗಳ ಹಣ ವರ್ಗಾವಣೆಯಾಗಲಿದ್ದು, ಎರಡು ತಿಂಗಳಿಂದ ಪಾವತಿಯಾಗದ ಗೃಹಲಕ್ಷ್ಮಿ ಹಣವನ್ನು ಸಾಲು ಸಾಲು ಹಬ್ಬಗಳ ಮುಂಚೆ ಮಹಿಳೆಯರ ಕೈಗೆ ಹಣ ಸಿಗಲಿದೆ. ಹಣಕಾಸು ಸಚಿವಾಲಯದಿಂದ ಅನುದಾನ ಬಿಡುಗಡೆಯಾಗಿದ್ದು, ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ನಾಳೆಯಿಂದ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಖಾತೆಗೆ ಜೂನ್ ತಿಂಗಳ ಹಣವನ್ನು ಜಮಾ ಮಾಡಲಾಗಿದೆ.

ಮೊದಲ ಹಂತದಲ್ಲಿ 533 ಕೋಟಿ ರೂ.ಗಳ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಮೂಲಗಳು. ಎಂದರು. ಚಿತ್ರದುರ್ಗ, ಬೆಂಗಳೂರು ಗ್ರಾಮ ಮತ್ತು ಕೋಲಾರ ಜಿಲ್ಲೆಗಳಿಗೆ ಬಿಡುಗಡೆ ಮಾಡಲಿದೆ, ಇನ್ನೂ ಉಳಿದ ಜಿಲ್ಲೆಗಳಿಗೆ 2ನೆ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂಬುದಾಗಿ ಮೂಲಗಳು ತಿಳಿಸಿವೆ. ಹಣ ಬಂದಿದೆಯೋ ಇಲ್ಲವೋ ಇಂಬುದನ್ನು ನಿಮ್ಮ ಅಕೌಂಟ್ ಚೆಕ್ ಮಾಡಿ ಅಥವಾDBT ಸ್ಟೇಟಸ್ ಚೆಕ್ ಮಾಡಿ

Related Articles

Leave a Reply

Your email address will not be published. Required fields are marked *

Back to top button