
ಜಯಘೋಷ ಮಧ್ಯೆ ದಿಗ್ಗಿ ಸಂಗಮೇಶ್ವರರ ರಥೋತ್ಸವ
ಸಗರನಾಡಿನ ಆರಾಧ್ಯ ದೇವ ಸಂಗಮೇಶ್ವರರ ರಥೋತ್ಸವ
ವಿನಯವಾಣಿ ಸಮಾಚಾರ
Yadgiei,ಶಹಾಪುರಃ ಸಗರನಾಡಿನ ಆರಾಧ್ಯ ದೈವ ಭಾವೈಕ್ಯತೆಯ ಪರಂಪರೆಯ ದಿಗ್ಗಿ ಸಂಗಮೇಶ್ವರರ ರಥೋತ್ಸವ ಸಹಸ್ರಾರು ಭಕ್ತಾಧಿಗಳ ಜಯಘೋಷ ಮಧ್ಯೆ ಸಂಭ್ರಮದಿAದ ಮಂಗಳವಾರ ಸಂಜೆ ಜರುಗಿತು. ರಥೋತ್ಸವಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ದೇವಯ್ಯ ಪೂಜಾರಿ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವ ವೇಳೆ ಭಕ್ತಾಧಿಗಳು ಬಾಳೆಹಣ್ಣು, ಉತ್ತುತ್ತಿ ಎಸೆದು ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಪವಿತ್ರ ಶ್ರಾವಣ ಮಾಸ ನಾಲ್ಕನೇ ಸೋಮವಾರ ಜಾತ್ರಾ ಮಹೋತ್ಸವ ಆರಂಭಗೊAಡು, ಅಂದು ಉಚ್ಛಾಯಿ ರಥೋತ್ಸವ ಮೂಲಕ ಜಾತ್ರೆಗ ಚಾಲನೆ ನೀಡಲಾಗಿತ್ತು. ಸಾಂಪ್ರದಾಯದಂತೆ ಮರುದಿನ ಮಂಗಳವಾರ ಮಹಾ ರಥೋತ್ಸವ ಜರುಗಿತು. ರಥೋತ್ಸವ ಹಿನ್ನೆಲೆ ಸುಕ್ಷೇತ್ರ ದಿಗ್ಗಿ ಸಂಗಮೇಶ್ವರರ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸುತ್ತಿದ್ದು, ಗವಿಯಲ್ಲಿ ವಿರಾಜಮಾನರಾದ ಸಂಗಮೇಶ್ವರರಿಗೆ ನೈವೇದ್ಯ, ಹೂ, ಕಾಯಿ, ಕರ್ಪೂರ ಅರ್ಪಿಸಿ ಕೃತಾರ್ಥರಾದರು. ಜಾತ್ರೆ ಹಿನ್ನೆಲೆ ಎಂದಿನAತೆ ಬೆಳಗ್ಗೆ ಸಂಗಮೇಶ್ವರರ ಮೂರ್ತಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನೆರವೇರಿಸಲಾಗಿತ್ತು.
ಮಹಾರಾಷ್ಟ್ರ, ಆಂದ್ರ ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತಾಧಿಗಳು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರು. ನಿರಂತರ ಮಳೆಯಿಂದಾಗಿ ಒಂದಿಷ್ಟು ಅಡಚಣೆ ಉಂಟಾದರೂ ಸಂಜೆ ಮಳೆ ನಿಂತಿರುವ ಹಿನ್ನೆಲೆ ಜನಸ್ತೋಮ ತಂಡೋಪ ತಂಡವಾಗಿ ಆಗಮಿ ಶ್ರೀದೇವರ ದರ್ಶನ ಪಡೆದರು. ರಥೋತ್ಸವದಲ್ಲಿ ಭಾಗವಹಿಸಿ ಕಾಯಿ ಕರ್ಪೂರ ಸಲ್ಲಿಸಿದರು.
ಅಲ್ಲದೆ ರತೋತ್ಸವ ನಂತರ ಮದ್ದು ಸುಡುವ ಕಾರ್ಯಕ್ರಮವು ಜರುಗಿತು. ಅಸಂಖ್ಯಾತ ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಂಪನೆಯ ವಾತಾವರಣದಲ್ಲಿ ವಿವಿಧ ತರಹೆವಾರಿ ಬಿಸಿ ಬಿಸಿ ಜಿಲೇಬಿ, ಭಜಿ ಮತ್ತು ಫಳಾರ ಸವಿದು ಧನ್ಯತೆ ಮೆರೆದರು. ಜಾತ್ರೆಯಲ್ಲಿ ಮಹಿಳೆಯರು ಬಳೆ, ಕುಂಕುಮ, ವಿಭೂತಿ ಸೇರಿದಂತೆ ಮಕ್ಕಳಿಗೆ ಬೇಕಾದ ತಮಗಿಷ್ಟದ ಆಟಾಟೋಪ ಸಾಮಾಗ್ರಿಗಳು ಖರೀದಿಯಲ್ಲಿ ತೊಡಗಿದ್ದರು.