ಕಥೆ

‘ಕಾಣದ ಕಣ್ಣು’ ಈ ಕಥೆ ಓದಿ ಹಲವು ಚಿಂತನೆ ಮೂಡಬಹುದು

ಕಾಣದ ಕಣ್ಣು

ರಾಜಪ್ಪನಿಗೆ ಆಗಲೇ ಸುಮಾರು ಎಪ್ಪತ್ತು ವರ್ಷ. ಹೆಂಡತಿ ತೀರಿ­ಹೋಗಿ­ದ್ದಾಳೆ. ಮಗ, ಸೊಸೆ ಬೇರೆ ಊರಿನಲ್ಲಿ ನೆಲೆಯಾಗಿದ್ದಾರೆ. ಈತ ಒಬ್ಬನೇ ತನ್ನೂರಿನ ದೊಡ್ಡ ಮನೆಯಲ್ಲಿ ಉಳಿದಿ­ದ್ದಾನೆ.

ಯಾರೋ ಬಂದು ದಿನವೂ ಅಡುಗೆ ಮಾಡಿಕೊಟ್ಟು ಹೋಗುತ್ತಾರೆ, ಮನೆಯಲ್ಲಿ ಆಳುಗಳಿದ್ದಾರೆ. ಈತ­­ನದು ಭಾರಿ ಶ್ರೀಮಂತರ ಮನೆತನ. ಹೊಲದ ಉತ್ಪನ್ನ ತುಂಬ ದೊಡ್ಡದು. ಅದ­ಕ್ಕೆಂದೇ ಆತನಿಗೆ ಊರು ಬಿಟ್ಟು ಹೋಗಲು ಮನಸ್ಸಿಲ್ಲ.

ಈ ಸಂದರ್ಭದಲ್ಲಿ ರಾಜಪ್ಪನ ಕಣ್ಣು ಮಂದವಾಗತೊಡಗಿದವು. ಯಾವುದೂ ಸ್ಪಷ್ಟವಾಗಿ ಕಾಣು­ತ್ತಿಲ್ಲ. ಹೀಗೆಯೇ ಮುಂದುವರೆದರೆ ಆರು ತಿಂಗಳಲ್ಲಿ ತಾನು ಪೂರ್ತಿ ಅಂಧನೇ ಆಗಿ­ಬಿಡು­ತ್ತೇನೆಂಬ ಭಯ ಕಾಡತೊ­ಡಗಿತು.

ಕಂಡವರನ್ನೆಲ್ಲ ಪರಿಹಾರಕ್ಕಾಗಿ ಕೇಳಿದ. ಆಗ ಯಾರೋ ಒಬ್ಬರು ದಿನಕರ ಪಂಡಿತನ ಬಗ್ಗೆ ಹೇಳಿದರು. ಅವನು ಕಣ್ಣಿನ ದೋಷ­ವನ್ನು ಖಂಡಿತ­ವಾಗಿಯೂ ಪರಿಹರಿಸುತ್ತಾನೆ. ಆದರೆ ಅವನ ಫೀಸು ಬಹಳ ಹೆಚ್ಚು ಎಂದರು.

ರಾಜಪ್ಪ ದಿನಕರ ಪಂಡಿತನನ್ನು ಕರೆಸಿ ಮಾತ­ನಾಡಿದ. ಆತನೂ ಅವನು ಕಣ್ಣಿನ ಪರೀಕ್ಷೆ ಮಾಡಿ ಆರು ತಿಂಗಳಿನಲ್ಲಿ ಸಂಪೂರ್ಣ ಗುಣ­ವಾಗುವ ಭರವಸೆ­ನೀಡಿದ.

ನಿರೀಕ್ಷಿಸಿದಂತೆ ಅವನ ಫೀಸೂ ಭಾರಿಯಾಗಿಯೇ ಇತ್ತು. ಕಣ್ಣು ಮುಖ್ಯ­ವಲ್ಲವೇ? ರಾಜಪ್ಪ ಫೀಸನ್ನು ಒಪ್ಪಿದ.
ದಿನಕರ ಪಂಡಿತ ಹೇಳಿದ, ‘ನನಗೆ ಮೊದಲು ಇಪ್ಪತ್ತು ಸಾವಿರ ರೂಪಾಯಿ ಕೊಡಬೇಕು. ಆರು ತಿಂಗ­ಳಿನ ನಂತರ ಕಣ್ಣು ಪೂರ್ತಿ ಗುಣ­ವಾದ ಮೇಲೆ, ಸ್ಪಷ್ಟವಾಗಿ ಕಾಣ­ತೊಡಗಿ­ದೊಡನೆ ಉಳಿದ ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ ಕೊಡತಕ್ಕದ್ದು’ ಈ ಕರಾರಿಗೆ ರಾಜಪ್ಪ ಒಪ್ಪಿದ. ಚಿಕಿತ್ಸೆ ಪ್ರಾರಂಭವಾಯಿತು.

ದಿನಕರ ಪಂಡಿತ ಒಳ್ಳೆಯ ವೈದ್ಯ­ನಾದರೂ ಬಹಳ ಆಸೆ­ಬರುಕ. ದಿನಾಲು ಬಂದು ರಾಜಪ್ಪನ ಕಣ್ಣುಗಳಿಗೆ ಔಷಧಿ ಹಾಕಿ ನಂತರ ಕಣ್ಣುಗಳ ಮೇಲೆ ಔಷಧಿಯ ಪಟ್ಟಿಯನ್ನು ಹಾಕಿ ಬಿಡುತ್ತಿದ್ದ.

ಅದನ್ನು ತೆಗೆಯು­ವವರೆಗೆ ರಾಜಪ್ಪನಿಗೆ ಏನೂ ಕಾಣುತ್ತಿರಲಿಲ್ಲ. ಪಟ್ಟಿಯನ್ನು ತೆಗೆದ ಮೇಲೆಯೂ ಆದಷ್ಟು ಮಟ್ಟಿಗೆ ಕಣ್ಣು ಮುಚ್ಚಿಕೊಂಡೇ ಇರುವಂತೆ ತಾಕೀತು ಮಾಡಿದ್ದ.

ದಿನಕರ ಪಂಡಿತ ರಾಜಪ್ಪನ ಮನೆಯನ್ನು ಗಮನಿಸಿದ. ಅವನ ದೇವರ ಮನೆಯಲ್ಲಿ ಬಂಗಾರದ, ಬೆಳ್ಳಿಯ ಪಾತ್ರೆಗಳು, ಆಭರಣಗಳು, ವಿಗ್ರಹ­ಗಳಿದ್ದವು. ಅವುಗಳ ಬೆಲೆ ಆದಷ್ಟು ಲಕ್ಷ ರೂಪಾ­ಯಿ­ಗಳಾಗುತ್ತಿತ್ತೋ? ಪಂಡಿತ ದಿನಕ್ಕೊಂದರಂತೆ ಒಂದೊಂದನ್ನೇ ಕದ್ದು­ಕೊಂಡು ಮನೆಗೆ ಹೋಗುತ್ತಿದ್ದ.

ಆರು ತಿಂಗಳಲ್ಲಿ ದೇವರ ಮನೆ ಚೊಕ್ಕಟ­ವಾಗು­ವು­ದಷ್ಟೇ ಅಲ್ಲ, ಮನೆಯಲ್ಲಿದ್ದ ಯಾವ ಬೆಲೆಬಾಳುವ ಸಾಮಾನುಗಳೂ ಉಳಿಯ­ಲಿಲ್ಲ. ಆರು ತಿಂಗಳಿನ ಚಿಕಿತ್ಸೆ ಮುಗಿದ ನಂತರ ಈಗ ರಾಜಪ್ಪನಿಗೆ ಸ್ಪಷ್ಟವಾಗಿ ಕಾಣು­ವು­­ದರಿಂದ ಉಳಿದ ಫೀಸನ್ನು ನೀಡಲು ದಿನಕರ ಪಂಡಿತ ಒತ್ತಾಯಿಸಿದ.

ಕಣ್ಣು ಚೆನ್ನಾಗಿ ಕಾಣುತ್ತಿದ್ದ ರಾಜಪ್ಪ ಮನೆ­ಯನ್ನು ಗಮನಿಸಿದಾಗ ದಿನಕರನ ಮೋಸದ ಅರಿವಾಗಿ ಹಣ ನೀಡುವು­ದಿ­ಲ್ಲವೆಂದು ಹೇಳಿದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button