ಇದೊಂದು ಅದ್ಭುತ ವೈಜ್ಞಾನಿಕ ಕಥೆ ಓದಿ
ದಿನಕ್ಕೊಂದು ಕಥೆ
ಒಂದು ಅದ್ಬುತ ವೈಜ್ಞಾನಿಕ ಕತೆ ನಿಮ್ಮ ಮುಂದೆ.
ಒಬ್ಬ ತಾಯಿ ತನ್ನ ಪೂಜೆ ಕೆಲಸವನ್ನು ಮುಗಿಸಿ ಪುರುಸೊತ್ತು ಮಾಡಿಕೊಂಡು ವಿದೇಶದಲ್ಲಿ ನೆಲೆಸಿರುವ ತನ್ನ ಮಗನೊಂದಿಗೆ ವೀಡಿಯೋ ಚಾಟ್ ಮಾಡುತ್ತ ಕೇಳಿಯೇ ಬಿಟ್ಟಳು. ಮಗಾ ಪೂಜೆ ಉಪಾಸನೆ ಏನಾದರೂ ಮಾಡತ್ತಿದ್ದಿಯೋ ಇಲ್ಲವೋ?
ಮಗ :ಅಮ್ಮಾ, ನಾನೊಬ್ಬ ವೈಜ್ಞಾನಿಕ ಜೀವಿ. ನಾನು ಅಮೆರಿಕದಲ್ಲಿ ಮಾನವನ ವಿಕಾಸದ ಮೇಲೆ ಕೆಲಸ ಮಾಡುತ್ತಿದ್ದೇನೆ. ವಿಕಾಸದ ಸಿದ್ಧಾಂತ ಚಾರ್ಲ್ಸ್ ಡಾರ್ವಿನ್..
ಅಮ್ಮಾ ನೀನೇನಾದರು ಅವನ ಬಗ್ಗೆ ಕೇಳಿದ್ದಿಯಾ?
ಅಮ್ಮ :(ನಗುತ್ತ) ಹೌದು, ಡಾರ್ವಿನ್ ಬಗ್ಗೆ ನನಗೆ ಗೊತ್ತಿದೆ. ಅವನು ಯಾವುದೆಲ್ಲ ಶೋಧನೆ ಮಾಡಿದ್ದಾನೆ ಅದು ವಾಸ್ತವದಲ್ಲಿ ಸನಾತನ ಧರ್ಮಕ್ಕೆ ಬಹಳ ಹಳೆಯ ವಿಷಯ.
ಒಂದು ವೇಳೆ ನೀನೇನಾದರು ಬುದ್ಧಿವಂತನಾಗಿದ್ದರೆ ಅದನ್ನು ಕೇಳು. (ತಾಯಿ ಪ್ರತಿಸ್ಪರ್ಧಿಯಾಗಿಯೇ ಉತ್ತರ ಕೊಟ್ಟಳು)
ನೀನೇನಾದರು ದಶಾವತಾರದ ಬಗ್ಗೆ ಕೇಳಿದ್ದಿಯಾ?
ಮಗ :ವಿಷ್ಣುವಿನ ಹತ್ತು ಅವತಾರ ಅಲ್ಲವೇನಮ್ಮಾ?ಆದರೆ ನನ್ನ ಸಂಶೋಧನೆಗೂ ದಶಾವತಾರಕ್ಕೂ ಎಲ್ಲಿಯ
ಸಂಭಂಧ?
ಅಮ್ಮ :ಸಂಬಂಧ ಇದೆ. ನೀನು ಮತ್ತು ಡಾರ್ವಿನ್ ಏನು ತಿಳಿದುಕೊಂಡಿಲ್ಲ ಅದನ್ನು ನಾನು ನಿನಗೆ ತಿಳಿಸುತ್ತೇನೆ.
ಮೊದಲ ಅವತಾರ ಆಗಿತ್ತು ‘ಮತ್ಸ್ಯ’ ಅಂದರೆ ಮೀನು. ಹೀಗೆ ಯಾಕೆಂದರೆ ಮಾನವನ ಜೀವನ ನೀರಿನಿಂದಲೇ ಆರಂಭವಾಗಿದೆ. ಇದು ಸತ್ಯ ಹೌದೋ ಅಲ್ಲವೋ?
(ಮಗ ಈಗ ಲಕ್ಷ್ಯಕ್ಕೊಟ್ಟು ಕೇಳಲಾರಂಭಿಸಿದ)
ಅದರ ನಂತರ ಬಂತು ಎರಡನೇ ಅವತಾರ ‘ಕೂರ್ಮ’ ಅರ್ಥಾತ್ ಆಮೆ. ಅದು ಸಮುದ್ರದಿಂದ ಜಮೀನಿನಕಡೆ ವಿಕಾಸ ತೋರಿಸಿತು.
ಮೂರನೇ ಅವತಾರ ‘ವರಾಹ’ ಅಂದರೆ ಹಂದಿ. ಅದರ ಅರ್ಥ ಕಾಡುಪ್ರಾಣಿ. ಅದರಲ್ಲಿ ಅಧಿಕ ಬುದ್ಧಿ ಇರುವುದಿಲ್ಲ. ನೀನು ಅದಕ್ಕೆ ಡಾಯನಾಸೋರ ಎನ್ನುತ್ತೀಯಾ. (ಮಗ ಕಣ್ಣು ಹೊರಳಿಸಿ ಒಪ್ಪಿಗೆ ಸೂಚಿಸಿದ)
ನಾಲ್ಕನೇ ಅವತಾರ ‘ನರಸಿಂಹ’ ಅರ್ಧ ಮಾನವ ಅರ್ಧ ಪಶು ಅದು ತೋರಿಸಿತು ಕಾಡು ಪ್ರಾಣಿಯಿಂದ ಬುದ್ಧಿವಂತ ಜೀವಿಯ ವಿಕಾಸ.
ಐದನೇ ಅವತಾರ ‘ವಾಮನ’ ಕುಳ್ಳ. ವಾಸ್ತವವಾಗಿ ಎತ್ತರಕ್ಕೆ ವೃದ್ಧಿ ಯಾಗಲು ಶಕ್ಯನಾಗುತ್ತಿದ್ದ ಅದು ಯಾಕೆಂದು ನೀನೇನಾದರು ಗೊತ್ತಾ? ಯಾಕೆಂದರೆ ಮನಷ್ಯರಲ್ಲಿ ಎರಡು ಪ್ರಕಾರ 1. ಹೋಮೋಇರೆಕ್ಟಸ(ನರವಾನರ) 2.ಹೋಮೋಸೆಪಿಅಂಸ(ಮಾನವ)ಮತ್ತು ಹೋಮೋಸೆಪಿಅಂಸ ಹೋರಾಟವನ್ನು ಗೆದ್ದುಬಿಟ್ಟ. (ಮಗ ದಶಾವತಾರದ ಪ್ರಸಂಗವನ್ನು ಕೇಳಿ ಸ್ತಬ್ಧನಾಗಿ ಹೋದನು.
ಅಮ್ಮ ಹೇಳುವುದನ್ನು ಮುಂದುವರಿಸಿದಳು)
ಆರನೇ ಅವತಾರ ‘ಪರಶುರಾಮ’ ಅವನ ಕೈಯಲ್ಲಿ ಶಸ್ತ್ರ (ಕೊಡಲಿ) ದ ತಾಕತ್ತು ಇದೆ. ಅದು ನಮಗೆ ತೋರಿಸುತ್ತದೆ ಏನೆಂದರೆ ಆ ಮಾನವನಿಗೆ ಗುಹೆ ಅಥವಾ ಕಾಡಿನಲ್ಲಿರುವುದು ಅಸಮಂಜಸ ಮತ್ತು ಅಸಾಮಾಜಿಕ
ಏಳನೇ ಅವತಾರ ‘ಶ್ರೀ ರಾಮ’ ಮರ್ಯಾದಾಪುರುಷೋತ್ತಮ. ವಿಚಾರಯುಕ್ತ ಪ್ರಥಮ ಸಾಮಾಜಿಕ ವ್ಯಕ್ತಿ. ಅವನು ಸಮಾಜದ ನಿಯಮ ಮತ್ತು ಸಮಸ್ತ ಸಂಬಂಧಗಳ ಮರ್ಯಾದೆ ತಯಾರಿಸಿದನು.
ಎಂಟನೇ ಅವತಾರ ‘ಶ್ರೀ ಕೃಷ್ಣ’ ರಾಜನೇತಾ, ರಾಜನೀತಿಜ್ಞ,ಅದು ಏನು ಕಲಿಸಿತೆಂದರೆ, ಸಮಾಜದ ನಿಯಮಗಳ ಆನಂದ ತೆಗೆದುಕೊಳ್ಳುತ್ತಾ ಸಾಮಾಜಿಕ ಚೌಕಟ್ಟಿನಲ್ಲಿ ಇದ್ದುಕೊಂಡೇ ಯಾವ ರೀತಿ ಇರಲು ಶಕ್ಯ ಎಂಬುದನ್ನು. (ಮಗ ಆಶ್ಚರ್ಯಚಕಿತನಾಗಿ ಕೇಳುತ್ತಲೇ ಇದ್ದ. ಅಮ್ಮ ಜ್ಞಾನದ ಗಂಗೆಯನ್ನು ಹರಿಸುತ್ತಿದ್ದಳು.)
ಒಂಬತ್ತನೇ ಅವತಾರ ‘ಮಹಾತ್ಮ ಬುದ್ಧ’ ಇದು ಏನು ತಿಳಿಸುತ್ತದೆಯೆಂದರೆ ವ್ಯಕ್ತಿ ನರಸಿಂಹದಿಂದ ಎದ್ದು ಮಾನವನ ನಿಜವಾದ ಸ್ವಭಾವವನ್ನು ಶೋಧಿಸಿದನು. ಅವನು ಜ್ಞಾನದ ಅಂತಿಮ ಶೋಧನೆಯ ಪರಿಚಯ ಮಾಡಿಕೊಟ್ಟನು.
ಕೊನೆಯಲ್ಲಿ ಹತ್ತನೆಯ ಅವತಾರ ‘ಕಲ್ಕಿ’. ಆ ಮಾನವ ಯಾವುದೆಂದರೆ, ಅದರ ಮೇಲೆ ನೀನು ಶೋಧ ಮಾಡುತ್ತಿದ್ದಿಯಾ. ಆ ಮಾನವ ಅನುವಂಶಿಕ ರೂಪದಿಂದ ಶ್ರೇಷ್ಠನಾಗುವನು. (ಮಗ ಅಮ್ಮನನ್ನು ದಂಗಾಗಿ ನೋಡುತ್ತಲೇ ಇದ್ದ. ಕೊನೆಗೆ ಹೇಳಿದ)
ಮಗ:ಅಮ್ಮ! ಇದು ಅದ್ಭುತವಾಗಿದೆ. ಹಿಂದು ದರ್ಶನ ವಾಸ್ತವದಲ್ಲಿ ಅರ್ಥಪೂರ್ಣವಾಗಿದೆ.
ವೇದ, ಪುರಾಣ, ಗ್ರಂಥ, ಉಪನಿಷತ್ತು, ಇತ್ಯಾದಿಗಳೆಲ್ಲವೂ ಅರ್ಥಪೂರ್ಣವಾಗಿದೆ. ಕೇವಲ ಅವುಗಳನ್ನು ನೋಡುವ ದೃಷ್ಟಿಕೋನ ಸರಿಯಾಗಿರಬೇಕು. ಅದು ಧಾರ್ಮಿಕವಾಗಿರಲೀ ಅಥವಾ ವೈಜ್ಞಾನಿಕವಾಗಿರಲಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882