ಇನ್ನೊಬ್ಬರನ್ನ ಅಳೆಯುವ ಮುನ್ನ ನಿಮ್ಮನ್ನ ನೀವು ಅಳೆದುಕೊಳ್ಳಿ
ಪರಿಪೂರ್ಣ ಮೌನ
ಯೆನ್ ಮಾಸ್ಟರ್ ನಿಂದ ದೀಕ್ಷೆಯನ್ನು ಪಡೆದ ನಾಲ್ವರು ಶಿಷ್ಯರು ಜಪಾನ್ ಗೆ ಬರುತ್ತಾರೆ. ಗುರುವಿನ ಆದೇಶದಂತೆ ಮೌನಾಚರಣೆಗೆ ಮುಂದಾಗಿ ಧ್ಯಾನ ಪಕ್ರಿಯೆಯಲ್ಲಿ ತೊಡಗುತ್ತಾರೆ. ಆದರೆ ಯೆನ್ ಮಾಸ್ಟರ್ ಇನ್ನೂ ಜಪಾನ್ ಗೆ ಬಂದಿರುವುದಿಲ್ಲ. ಶಿಷ್ಯರು ತಾವು ಭಾವಿಸಿದಂತೆ ಮೊದಲ ದಿನ ಕಳೆಯುತ್ತದೆ. ಮೌನವ್ರತವನ್ನು ಅವರು ಪರಿಪೂರ್ಣವಾಗಿ ಪಾಲಿಸುತ್ತಾರೆ.
ಮರುದಿನ ಸಂಜೆಯಾಗುತ್ತಿದ್ದಂತೆ ದೀಪದ ಎಣ್ಣೆ ಮುಗಿದು ಬೆಳಕು ಮಂದವಾಗುತ್ತದೆ. ಆ ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ಶಿಯಾಂಗ್ಗೆ ಏನು ಮಾಡಬೇಕು ಎನ್ನುವುದೇ ತಿಳಿಯುವುದಿಲ್ಲ.
ಅವನು ಕೋಪೋದ್ರಿಕ್ತಾನಾಗುತ್ತಾನೆ. ತಾಳ್ಮೆ ಕಳೆದುಕೊಂಡು “ದೀಪವನ್ನು ಉರಿಸು” ಎಂದು ದೊಡ್ಡ ಧ್ವನಿಯಲ್ಲಿ ಬದಿಯಲ್ಲೇ ಇದ್ದ ಸೇವಕನ ಮೇಲೆ ರೇಗುತ್ತಾನೆ.
ಶಿಯಾಂಗ್ನ ಕೂಗು ಕೇಳಿದ ಅವನ ಗೆಳೆಯ ಮಿಯಾತ್ಸು ಕುತೂಹಲದಿಂದ ಹಿಂದಿರುಗಿ ನೋಡುತ್ತಾನೆ. ತನ್ನ ಗೆಳೆಯನನ್ನು ಉದ್ದೇಶಿಸಿ “ಶಿಯಾಂಗ್ ಮಾಸ್ಟರ್ ಹೇಳಿದಂತೆ ಮೌನವಾಗಿರಬೇಕು ಎಂಬ ಸಂಗತಿಯನ್ನು ಮರೆತುಬಿಟ್ಟಿಯಾ?” ಎಂದು ಪ್ರಶಿಸುತ್ತಾನೆ.
ಅದೇ ಹೊತ್ತಿಗೆ ಗುಂಪಿನಲ್ಲಿದ್ದ ಮತ್ತೊಬ್ಬ “ನೀವೆಲ್ಲರೂ ಮೂರ್ಖರು! ಪರಸ್ವರ ಮಾತನಾಡಿಕೊಂಡು ಸುಮ್ಮನೆ ಗದ್ದಲ ಮಾಡಿಕೊಳ್ಳುತ್ತೀರಿ.
ವೃಥಾ ಯಾಕೆ ಮಾತನಾಡುತ್ತಿರಿ? ಸುಮ್ಮನಿರಲು ಆಗುವುದಿಲ್ಲವೇ? ಎಂದು ಗೊಣಗುತ್ತಾನೆ.
ಅಷ್ಟಕ್ಕೇ ಅವನು ಮಾತು ನಿಲ್ಲಿಸುವುದಿಲ್ಲ. ಮುಂದುವರಿದು “ನಿಮಗೆಲ್ಲಾ ಹೋಲಿಸಿದರೆ ನಾನೊಬ್ಬನೇ ಸುಮ್ಮನಿದ್ದೇನೆ” ಎನ್ನುತ್ತಾನೆ. ವಾಸ್ತವವಾಗಿ ಅವನೇ ಮೌನವನ್ನು ಮುರಿದಿರುತ್ತಾನೆ.
ನೀತಿ :– ಇನ್ನೊಬ್ಬರನ್ನು ಮಾಪನ ಮಾಡುವುದಕ್ಕೆ ಮೊದಲು ನಿಮ್ಮನ್ನು ನೀವೇ ಅಳೆದುಕೊಳ್ಳಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882