ಪ್ರಮುಖ ಸುದ್ದಿ
ನಾನು ಕುರಬನಲ್ಲ, ನನಗೆ ಜಾತಿ ಗೊತ್ತಿಲ್ಲ-ಕೆ.ಎಸ್.ಈಶ್ವರಪ್ಪ
ಸಿದ್ರಾಮಯ್ಯ ವಿರುದ್ಧ ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ
ದಾವಣಗೆರೆಃ ನನಗೆ ಜಾತಿ ಗೊತ್ತಿಲ್ಲ. ನನ್ನ ಮನಸ್ಸಿನಲ್ಲಿ ಜಾತಿ ಎಂಬುದಿಲ್ಲ. ನಾನು ಕುರುಬನೇ ಅಲ್ಲ ಜಾತಿ ಹಿಡಿದು ನಾನು ಕೆಲಸ ಮಾಡುವವನಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಸಿದ್ರಾಮಯ್ಯನವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಕ್ಕೆ ಹೇಳಿಕೆ ನೀಡಿದ ಅವರು, ನನಗೆ ಜಾತಿ ಗೊತ್ತಿಲ್ಲ. ನನಗೆ ಗೊತ್ತಿರುವದು ಮನುಷ್ಯ ಜಾತಿ ಮಾತ್ರ. ಧರ್ಮ ಒಡೆಯಬಾರದು ಧರ್ಮ ಒಡೆದವರು ಈಗ ಅನುಭವಿಸುತ್ತಿದ್ದಾರೆ. ಜಾತಿ ಎತ್ತಿ ಕಟ್ಟಬಾರದು. ಜಾತಿ ಎತ್ತಿ ಕಟ್ಟುವವರು ಮನುಷ್ಯರೇ ಅಲ್ಲ ಎಂದು ಅವರು ಸಿದ್ರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.