ಪ್ರಮುಖ ಸುದ್ದಿ

ಸಶಕ್ತ ಭಾರತ ನಿರ್ಮಾಣಕ್ಕೆ ಆತ್ಮ ನಿರ್ಭರ ಪೂರಕ- ಕಾಶ್ಮೀರ ಲಾಲಜಿ

ಸ್ವಾಭಿಮಾನ, ಸ್ವಾವಲಂಬಿ ಬದುಕಿನಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯ

ಯಾದಗಿರಿ, ಶಹಾಪುರ: ಮಹಾತ್ಮ ಗಾಂಧೀಜಿಯವರು, ಪಂಡಿತ ದೀನದಯಾಳ ಉಪಾಧ್ಯಾಯರ ಪರಿಕಲ್ಪನೆಯಂತೆ ಕೊನೆಯ ಸಾಲಿನ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸ್ವಾತಂತ್ರ್ಯಯುಕ್ತ ಸ್ವಾವಲಂಬನೆ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟಾಗ, ಸಶಕ್ತ ಭಾರತದ ಮುನ್ನಡೆಗೆ ಅರ್ಥ ಬರುವುದರ ಜೊತೆಗೆ ಸ್ವಾವಲಂಬಿ ಭಾರತದ ನಿರ್ಮಾಣ ಸಾಧ್ಯವೆಂದು ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಂಘಟಕ ಕಾಶ್ಮೀರ ಲಾಲಜಿ ತಿಳಿಸಿದರು.

ನಗರದ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಸ್ವದೇಶಿ ಜಾಗರಣ ಮಂಚ್ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಿದ್ದ ನಮ್ಮ ಜಿಲ್ಲೆ ಸ್ವಾವಲಂಬಿ ಜಿಲ್ಲೆ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಹಿತ ನಮಗೆ ಮುಖ್ಯವಾಗಿರಬೇಕು, ನಮ್ಮ ಜಿಲ್ಲೆಗಳು ಸ್ವಾವಲಂಬಿಯಾಗಬೇಕಾದರೆ ಆರೋಗ್ಯದಾಯಕವಾದ ಅತಿ ಹೆಚ್ಚು ಕೈಗಳಿಗೆ ಕೆಲಸ ದೊರೆಯುವ ಗುರಿ ಹೊಂದಿರಬೇಕು. ಅಂದಾಗ ಮಾತ್ರ ಸಶಕ್ತ ಭಾರತ ನಿರ್ಮಾಣ ಸಾಧ್ಯವಿದೆ.

ಬಹುಸಂಖ್ಯಾತ ಜನರು ಉದ್ಯೋಗಿಗಳಾಗಬೇಕು. ಬದಲಾದ ಪರಿಸ್ಥಿತಿಯಲ್ಲಿ ಸ್ವಸಾಮಥ್ರ್ಯದಿಂದ ಬದುಕನ್ನು ಕಟ್ಟಿಕೊಳ್ಳಲು ಕೌಶಲ್ಯ ನೈಪುಣ್ಯ ತರಬೇತಿ ಪಡೆಯುವ ಅಗತ್ಯವಿದೆ. ಸ್ವದೇಶಿ ಉತ್ಪನ್ನಗಳ ಬಗ್ಗೆ ಬರಿ ಮತನಾಡಿದರೆ ಸಾಲದು, ಅವುಗಳ ತಯಾರಿಕೆಯಲ್ಲೂ ಮುಂದೆ ಬರಬೇಕು ಮತತು ಅವುಗಳ ಬಳಕೆಯಲ್ಲೂ ಪ್ರತಿಯೊಬ್ಬ ಭಾರತೀಯ ಅಭಿಮಾನದ ಮೂಲಕ ಬಳಕೆ ಮಾಡಬೇಕು.

ಮುಖ್ಯವಾಗಿ ಗುಣಮಟ್ಟದ ಸ್ವದೇಶಿ ಉತ್ಪನ್ನಗಳ ತಯಾರಿಕೆಯಾಗಬೇಕು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಷ್ಟು ಸಮರ್ಥರಾಗಿ ಹೊರಹೊಮ್ಮಲು ಆತ್ಮ ನಿರ್ಭರ ಭಾರತ ಹೆಚ್ಚು ಮೇಲ್ಪಂಕ್ತಿಯಾಗಿಯಾಗಿದೆ ಎಂದರು.

ಒಬ್ಬ ಬಡಿಗತನ ಮಾಡುವವರು, ಒಬ್ಬ ಶಿಲ್ಪಕಾರ ತನ್ನ ಸಹಾಯಕನಾಗಿ ಬಂದ ಒಬ್ಬೊಬ್ಬ ಶಿಷ್ಯರನ್ನು, ತನಗಿಂತ ಮಿಗಿಲಾದ ಕಾರ್ಯನಿಪುಣರನ್ನಾಗಿ ಮಾಡುತ್ತಿದ್ದ ರೀತಿ ಪುನರಾವರ್ತನೆಯಾಗಬೇಕು. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಥಳೀಯರು ಮುನ್ನುಗ್ಗಿ ಕೆಲಸ ಮಾಡಿದಾಗ ಸಂಪನ್ಮೂಲ ಕ್ರೋಢಿಕರಣಗೊಂಡು ಇಡಿ ಜಿಲ್ಲೆಗೆ ಹೆಮ್ಮೆ ತರುವಂತ ಕೆಲಸವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ವದೇಶಿ ಜಾಗರಣ ಮಂಚ್‍ನ ಪ್ರಮುಖರಾದ ಕೆ.ಜಗದೀಶ ಮಾತನಾಡಿ, ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳಿಗೆ ಪ್ರೋತ್ಸಾಹ ನೀಡಡಬೇಕು. ಸಾವಯುವ ಕೃಷಿ ನಮ್ಮ ಉಸಿರಾಗಬೇಕು, ಆರೋಗ್ಯಪೂರ್ಣ ಭಾರತಕ್ಕೆ ಪ್ರತಿಯೊಬ್ಬರು ಸಂಕಲ್ಪ ತೊಡಬೇಕು ಎಂದರು.

ವೇದಿಕೆ ಮೇಲೆ ಪ್ರಗತಿಪರ ಕೃಷಿಕರಾದ ದೇಸಾಯಪ್ಪ ದೇಸಾಯಿ, ಸ್ವದೇಶಿ ಚಿಂತಕ ಮಹಾದೇವಯ್ಯ ಕರದಳ್ಳಿ, ಎಸ್.ಸಿ.ಪಾಟೀಲ, ಎಸ್.ಲಿಂಗಮೂರ್ತಿ ಇದ್ದರು. ಪ್ರಾಸ್ತಾವಿಕವಾಗಿ ಗುರುಬಸಯ್ಯ ಗದ್ದುಗೆ ಮಾತನಾಡಿದರು. ಮುಖ್ಯಗುರು ಗೀತಾಂಜಲಿ ಪ್ರಾರ್ಥಿಸಿದರು, ಶಿವಪ್ರಸಾದ ಕರದಳ್ಳಿ ನಿರ್ವಹಿಸಿದರು, ಗೌರೀಶ ಆವಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಸಾಧಕರಾದ ಪ್ರಶಾಂತ.ಜಿ ಗುಂಬಳಾಪುರಮಠ, ಮಹೇಶ,ಶಿವಬಸಪ್ಪ, ಸಂಗಮೇಶ ಶಾಸ್ತ್ರಿ, ಅರ್ಜುನ ರಾಜಪುರೋಹಿತ ಅವರನ್ನು ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button