ಪ್ರಮುಖ ಸುದ್ದಿ

ಕೆಂಪುಕೋಟೆಯಲ್ಲಿ ನಮೋ ಆತ್ಮವಿಶ್ವಾಸದ ಆತ್ಮನಿರ್ಭರದ ಮಾತು

ಕೆಂಪುಕೋಟೆಯಲ್ಲಿ ನಮೋ ಆತ್ಮವಿಶ್ವಾಸದ ಆತ್ಮನಿರ್ಭರದ ಮಾತು

ನವದೆಹಲಿಃ ದೇಶದ ನಿವಾಸಿಗಳಿಗೆ ಸ್ವಾತಂತ್ರ್ಯುತ್ಸವದ ಶುಭಾಶಯಗಳು ಹೇಳುತ್ತಾ, ದೇಶದ ಏಳ್ಗೆಗೆ ಅಭಿವೃದ್ಧಿ ಗಾಗಿ ಆತ್ಮ ನಿರ್ಭರ ಅಗತ್ಯವಿದೆ. ಪ್ರತಿ ವಸ್ತುಗಳನ್ನು ಭಾರತದಲ್ಲಿ ಸಿದ್ಧತೆ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಕೊರೊನಾ ಆರಂಭದಲ್ಲಿ ಭಾರತ ಪಿಪಿಇ ಕಿಟ್, ವೆಂಟಿಲೇಟರ್ ಬೇರಡೆ ಯಿಂದ ಖರೀದಿಸಬೇಕಿತ್ತು. ಈಗ ಅವುಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಇದು ದೇಶದ ಜನರ ಆತ್ಮ ವಿಶ್ವಾಸ ಹೆಚ್ಚಿಸಿದೆ.

ಇಡಿ ಜಗತ್ತು ಆಹಾರ ಖರೀದಿಗೆ ಭಾರತದತ್ತ ನೋಡಬೇಕಿದೆ. ಹೀಗಾಗಿ ಕೃಷಿ ಅಭಿವೃದ್ಧಿ ಯತ್ತ‌ಹಲವು ಬದಲಾವಣೆ ತರವು ಮೂಲಕ ಇನ್ನಷ್ಟು ಕೃಷಿಕರಿಗೆ ಸೌಲಭ್ಯಗಳನ್ನು ನೀಡಲಾಗಿದೆ.‌ ಸಾಕಷ್ಟು ಸಹಕಾರ ನೀಡಲಾಗುತ್ತಿದೆ.

ಕೃಷಿ‌,‌ ರೈತರನ್ನು ಬಲಿಷ್ಠರನ್ನಾಗಿಸಲು 1 ಲಕ್ಷ ಕೋಟಿ ಮೀಸಲಿಡಲಾಗಿದೆ. ಆತ್ಮ‌ನಿರ್ಭರ ಭಾರತವಾಗಬೇಕಾದರೆ, ಆತ್ಮ ನಿರ್ಭರ ಕಿಸಾನ್ ಆಗಬೇಕಿದೆ. ಬಡವರು ಕೃಷಿಕರಿಗೆ ನೇರವಾಗಿ ಹಣ ಹಾಕುವ ವ್ಯವಸ್ಥೆ ಮಾಡಲಾಗಿದೆ.

ಭಾರತದ ರೈತರು ಈಗ ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿ ತಮ್ಮ ಬೆಳೆ ಆಹಾರ‌ಧಾನ್ಯ ಮಾರಾಟ‌ ಮಾಡಬಹುದು.
ಕೃಷಿ ಮೂಲ ಸೌಕರ್ಯ ವೃದ್ಧಿಸಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ರೈತರ ಉತ್ಪನ್ನ ಮಾರಾಟಕ್ಕೆ ಸಮರ್ಪಕ‌ ವ್ಯವಸ್ಥೆ ಕಲ್ಪಿಸಲಾಗಿದೆ.

ಜಲ ಜೀವನ್ ಯೋಜನೆಯಿಂದ 2 ಕೋಟಿ ಜನರಿಗೆ ಅನುಕೂಲವಾಗಿದೆ. ನಗರ, ಗ್ರಾಮೀಣ ಪ್ರದೇಶದ ಜನರಿಗೆ‌ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಮಾಧ್ಯಮ ವರ್ಗದ‌ ಜನರಿಗೆ‌ ಗೃಹ ಸಾಲದ ಬಡ್ಡಿ ಕಡಿಮೆ ಮಾಡಲಾಗಿದೆ ಮತ್ತು ಬೇಗನೆ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದಾಯ ತೆರಿಗೆ ಕಡಿಮೆ ಮಾಡಲಾಗಿದೆ ಜಿಎಸ್ಟಿ ಯಲ್ಲಿ ಬದಲಾವಣೆ ಮಾಡಲಾಗಿದೆ.‌ ಮಧ್ಯಮ ವರ್ಗದ‌ಜನರಿಗೆ ಅನುಕೂಲ ಕಲ್ಪಸಿದೆ.

ಕಳೆದ 30 ವರ್ಷಗಳ ನಂತರ ಶಿಕ್ಷಣ ನೀತಿ ಬದಲಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದು, ಸಂಶೋಧನಾತ್ಮಕ‌ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಜಾಗತಿಕ ನಾಗರಿಕ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ.

ಭಾರತಕ್ಕೆ ಅವಶ್ಯಕ‌ ಎನಿಸಿದಾಗ ಮಹಿಳೆಯರು ದೇಶ ಸೇವೆ ಮಾಡಿದ್ದಾರೆ. ಬಡ ಕುಟುಂಬದ ಮಹಿಳೆಯರಿಗೆ ಜನೌಷಧಿ‌ ಮಳಿಗೆ ಮೂಲಕ 5 ಸಾವಿರ ಕೋಟಿ‌ ಸ್ಯಾನಿಟರಿ ಪ್ಯಾಡ್‌ ವಿತರಿಸಲಾಗಿದೆ. ಬಡ ಕುಟುಂಬದ ಮಹಿಳೆಯರಿಗೆ ಮನೆ ಮನೆಗೆ ನೀರು, ವಿದ್ಯುತ್‌ ಪೂರೈಸಿದ್ದೇವೆ ಇನ್ನೂ ಕಾರ್ಯ‌ ಮುಂದುವರೆದಿದೆ.

ಬಡ ಮಹಿಳೆಯರ ಪರ‌ ಸರ್ಕಾರವಿದೆ. ಮುದ್ರಾ ಯೋಜನೆ ಮೂಲಕ ಬಡ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ.

ಲಡಾಖನಲ್ಲಿ ನಮ್ಮ ದೇಶದ ಸೈನಿಕರ‌ ಶಕ್ತಿ ಕುರಿತು ಎಲ್ಲರಿಗೆ ಹೆಮ್ಮೆ ತಂದಿರುವದು ಗೊತ್ತಿದೆ. ಇನ್ಮುಂದ ರಕ್ಷಣ ವಲಯ ಇನ್ನಷ್ಟು ಬಲಿಷ್ಠವಾಗಲಿದೆ. ಯುದ್ದ ಸಾಮಾಗ್ರಿಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. 101 ಶಸ್ತ್ರಾಸ್ತ್ರ ತಯಾರಿಸಲು ನಿರ್ಧರಿಸಲಾಗಿದೆ.

ಕೊರೊನಾ ವ್ಯಾಕ್ಸಿನ್ ಶೀಘ್ರ ದೊರೆಯಲಿದೆ

ದೇಶದಲ್ಲಿ ಕೊರೊನಾ ಲಸಿಕೆ ಮೂರು ವಿವಿಧ ರೀತಿಯ ಪ್ರಾಯೋಗಿಕ‌ ಹಂತಗಳಲ್ಲಿವೆ. ಲಸಿಕೆ ಕಂಡು ಹಿಡಿಯುವ ಜೊತೆಗೆ ಶ್ರೀಘದಲ್ಲಿ ಭಾರತೀಯರೆಲ್ಲರಿಗೂ ತಲುಪಿಸುವ ಕಾರ್ಯ‌ಮಾಡಲಾಗುವದು.

ವ್ಯಾಕ್ಸಿನ್ ಸಿದ್ಧತೆಯಲ್ಲಿ ಸಂಶೋಧಕರು ಋಷಿಮುನಿಗಳ ತರಹ ತಪಸ್ಸಿನಂತೆ ಕಾರ್ಯ ನಿರ್ವಹಿಸುತ್ತಿದೆ. ಲಸಿಕೆ ಕಂಡು ಹಿಡಿಯುವ ಜೊತೆಗೆ ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button