ಕಥೆ

ಮೊಬೈಲ್ ಗೆ ರಕ್ಷಾ ಕವಚ ಹಾಕಿದ ಯುವತಿಗೆ ತಂದೆ ಮಾಡಿದ ಪಾಠ

ದಿನಕ್ಕೊಂದು ಕಥೆ

ಒಬ್ಬಳು ಹುಡುಗಿ ಒಂದು Samsung galaxy ಮೊಬೈಲ್ ಕೊಂಡು ತಂದಳು
ತಂದೆ ಕೇಳಿದ : ಇದನ್ನು ಕೊಂಡ ಮೇಲೆ ನೀನು ಮಾಡಿದ
ಮೊದಲ ಕೆಲಸ ಏನು ?
“ಮೊಬೈಲ್ display ಗೆ ಗೆರೆ ಬೀಳದಂತ screen guard
ಮತ್ತು ಅದಕ್ಕೊಂದು safety cover ಕೊಂಡುಕೊಂಡೆ,”
ಎಂದು ಉತ್ತರಿಸಿದಳು.
“ನೀನು ಹಾಗೆ ಮಾಡಲೇ ಬೇಕೆಂದು ಯಾರಾದರೂ
ಒತ್ತಾಯ ಮಾಡಿದ್ರ ?”
“ಇಲ್ಲ”
“ಅದು ಮೊಬೈಲ್ ತಯಾರಿಕರಿಗೆ ಮಾಡಿದ ಅವಮಾನ ಎನಿಸಲಿಲ್ಲವೇ ?”
“ಇಲ್ಲ ಅಪ್ಪಾ! ನಿಜ ಹೇಳಬೇಕಂದ್ರೆ ಅವರೇ ಒಂದು safety cover ಮತ್ತು screen guard ಬಳಸುವಂತೆ ಸಲಹೆ ಮಾಡಿದ್ದಾರೆ”
“ಮೊಬೈಲ್ ಬಹಳ ಕೆಟ್ಟದಾಗಿ ಕಾಣುತ್ತೆ ಎಂದೋ ಅಥವಾ ಕಡಿಮೆ
ಬೆಲೆಯದ್ದೋ ಎಂದೋ ಹಾಗೆ safety cover ಹಾಕಿ
ಮುಚ್ಚಿದೆಯಾ ?”
“ನಿಜ ಹೇಳಬೇಕಂದ್ರೆ ಅದಕ್ಕೆ ಪೆಟ್ಟು ಬಿದ್ದು ಹಾಳಾಗದಿರಲಿ
ಮತ್ತು ಮೊಬೈಲ್ ತನ್ನ ಬೆಲೆ ಕಳೆದುಕೊಳ್ಳದಿರಲಿ ಎಂದು ಹಾಗೆ ಮಾಡಿದೆ”
“ಆ ರೀತಿ ಮಾಡಿದಾಗ ಮೊಬೈಲ್ ನ ಅಂದ ಕಡಿಮೆ ಆಗಲಿಲ್ವೆ?”
“ಇಲ್ಲ ಅಪ್ಪ, ನಾನು ಹಾಗೆ ಅಂದುಕೊಳ್ಳೋದೇ ಇಲ್ಲ!
ನನ್ನ ಕಣ್ಣಿಗೆ ಅದು ಮತ್ತಷ್ಟು ಸುಂದರವಾಗೇ ಕಾಣುತ್ತಿದೆ”.
ತಂದೆ ಮಗಳನ್ನು ಪ್ರೀತಿಯಿಂದ ನೋಡಿದ ಮತ್ತು ಹೇಳಿದ
“ಇದೇ ರೀತಿ ನಾನು ಒಂದು Samsung galaxy ಗಿಂತ ಬಹಳ ಬೆಲೆ ಬಾಳುವ ನಿನ್ನನ್ನು ಸರಿಯಾಗಿ ಮೈ ಮುಚ್ಚುವ ಬಟ್ಟೆ ಧರಿಸಿ
ಹೊರಗೆ ಓಡಾಡು ಎಂದಿದ್ರೆ ನೀನು ಒಪ್ಪುತಿದ್ಯಾ ?”
ಎಂದು ಕೇಳಿದ
ಅವಳು ಅದಕ್ಕೆ ಮೂಕಳಾದಳು.

ಪ್ರೀತಿಯ ಯುವತಿಯರೇ, ನೆನಪಿಡಿ ಕೆಟ್ಟದಾಗಿ ಮೈ ಅಂಗಾಂಗ ಬಿಚ್ಚಿ ತೋರಿಸುವ ಉದ್ರೇಕಿಸುವ ಬಟ್ಟೆ ಹಾಕಿಕೊಂಡು ಹೊರಗೆ ಓಡಾಡುವುದರಿಂದ ನಿಮ್ಮನ್ನು ಯಾರೂ ವಿಶೇಷ ಗೌರವದಿಂದ ನೋಡುವುದಿಲ್ಲ ಅದರಿಂದ ನಿಮ್ಮ ಗೌರವಕ್ಕೆ ಖಂಡಿತ ಕುಂದಾಗುತ್ತದೆಯೇ ಹೊರತು ಯಾರೂ ನಿಮ್ಮನ್ನು ಮಹಾ ಸುಂದರಿ ಎಂದು ಯಾರೂ ಅಂದುಕೊಳ್ಳುವುದಿಲ್ಲ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button