ಕಥೆ

ಬೈಕ್‌ ಕೊಡಿಸುತ್ತಿಲ್ಲವೆಂದು ತಂದೆಯ ಪರ್ಸ್ ಕದ್ದಿದ್ದ ಮಗನಿಗೆ ಶಾಕ್.!

ದಿನಕ್ಕೊಂದು ಕಥೆ

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ….?
ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ….
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪಾರ್ಸ್’ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.
ನಡೆಯುತ್ತಿದ್ದರೆ ಬೂಟ್’ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್’ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್’ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.
ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್’ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.
ಮತ್ತೆ ಅದರಲ್ಲಿ ಆಫೀಸ್’ಗೆ ಒಳ್ಳೆಯ ಬೂಟ್’ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.
‘ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ’ ಎಂಬ ಭಿತ್ತಿಪತ್ರ ಕಾಣಿಸಿತ್ತು.
ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ….?
ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ…..
ಈಗ ಬೂಟ್’ಗಳಿಂದ ನೋವಾಗುತ್ತಿಲ್ಲ….
ಮನೆಯಲ್ಲಿ ಅಪ್ಪ ಇಲ್ಲ… ಸ್ಕೂಟರ್ ಇಲ್ಲ… ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ….!
ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ….!
” ಬೇಡ ಅಪ್ಪ…! ನನಗೆ ಬೈಕ್ ಬೇಡ….!!ಅಂದೆ
ಆವಾಗ್ಲೆ ಗೊತ್ತಾಗಿದ್ದು ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.
ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.
ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ,
ಇಂತಹ ಕಥೆಗಳನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ಬೆಳೆಸಿ.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button