ಪ್ರಮುಖ ಸುದ್ದಿಬಸವಭಕ್ತಿ
ಶಹಾಪುರಃ ಬಯಲು ಹನುಮಾನ್ ಮಂದಿರದಲ್ಲಿ ಶ್ರಾವಣ ಸಂಪನ್ನ
ಬಯಲು ಹನುಮಾನ್ ಮಂದಿರದಲ್ಲಿ ಶ್ರಾವಣ ಸಂಪನ್ನ
ಶಹಾಪುರಃ ನಗರದ ನಾಗರ ಕೆರೆ ಮೇಲೆ ಬೆಟ್ಟದಲ್ಲಿರುವ ಬಯಲು ಹನುಮಾನ್ ಮಂದಿರದಲ್ಲಿ ಶನಿವಾರ ಶ್ರಾವಣ ಸಂಪನ್ನ ಕಾರ್ಯಕ್ರಮ ಜರುಗಿತು.
ಶ್ರಾವಣ ಮಾಸದ ಕಡೆ ಶನಿವಾರವಾದ ನಿನ್ನೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಗಿತ್ತು. ಅಲ್ಲದೆ ಇಡಿ ಮಂದಿರ ಶುಚಿಗೊಳಿಸಿ, ಹೂಗಳಿಂದ ಅಲಂಕರಿಸಲಾಗಿತ್ತು. ಕೊರೊನಾ ಹಿನ್ನೆಲೆ ಮುಂಜಾಗೃತವಾಗಿ ಸಂಕ್ಷಿಪ್ತವಾಗಿ ಈ ಬಾರಿ ಪೂಜೆ ಸಲ್ಲಿಸಲಾಗಿದೆ ಎಂದ ಭಕ್ತ ಮಂಡಳಿ ತಿಳಿಸಿದೆ.
ಬೆಳಗ್ಗೆಯಿಂದಲೇ ಭಕ್ತಾಧಿಗಳು, ಮಾಸ್ಕ್ ಧರಿಸಿ ಬಯಲು ಹನುಮಾನ್ ದೇವರ ದರ್ಶನ ಪಡೆದು ಹೂ ಕಾಯಿ ಕರ್ಪೂರ ಅರ್ಪಿಸುತ್ತಿರುವದು ಕಂಡು ಬಂದಿತು. ಕಳೆದ ನಾಲ್ಕು ದಿನಗಳಿಂದ ಮಳೆ ಯಾಗುತ್ತಿದ್ದು, ಇಡಿ ಮಂದಿರ ಪ್ರದೇಶದ ಗುಡ್ಡ ಹಸಿರಿನಿಂದ ಕಂಗೊಳಿಸುತ್ತಿತ್ತು. ತುಂತುರು ಮಳೆ ಶುಭ್ರಗೊಳಿಸುತ್ತಿತ್ತು. ಕೊನೆಯಲ್ಲಿ ಇಲ್ಲಿನ ಭಕ್ತಾಧಿಗಳು ಶ್ರೀದೇವರ ದರ್ಶನ ಪಡೆದು ಕೊರೊನಾ ಇಡಿ ಜಗತ್ತಿನಿಂದ ಮಾಯವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.