ಪ್ರಮುಖ ಸುದ್ದಿ

ಶಹಾಪುರಃ ವಾಹನ‌ ಸಂಚಾರಕ್ಕೆ ಪೊಲೀಸ್ ಬ್ರೇಕ್, ನೂರಾರು‌ ವಾಹನಗಳು ವಶಕ್ಕೆ

ಶಹಾಪುರಃ ವಾಹನ‌ ಸಂಚಾರಕ್ಕೆ ಪೊಲೀಸ್ ಬ್ರೇಕ್, ನೂರಾರು‌ ವಾಹನಗಳು ವಶಕ್ಕೆ

ಶಹಾಪುರಃ‌ ಕೊರೊನಾ ಎರಡನೇ ಅಲೆ ತೀವ್ರತೆ ಹೆಚ್ವಾದ ಹಿನ್ನೆಲೆ‌ ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯದಲ್ಲಿ ಇಂದಿನಿಂದ ಮೇ.24ರವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ನಗರದಲ್ಲಿ‌ ಬೆಳ್ಳಂಬೆಳಗ್ಗೆ ಪೊಲೀಸರು ಲಾಠಿ ಹಿಡಿದು ರಸ್ತೆಗಿಳಿದಿದ್ದು ನೂರಾರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರು, ಆಟೋ, ಬೈಕ್ ಗಳು‌ ಠಾಣೆ ಪ್ರದೇಶದಲ್ಲಿ ನಿಲ್ಲಿಸಲು ಜಾಗವಿಲ್ಲದಂತಾಗಿದೆ. ಹೀಗಾಗಿ‌ ವಶಕ್ಕೆ ಪಡೆದ ವಾಹನಗಳನ್ನು ಬೇರಡೆ‌ ನಿಲ್ಲಿಸುವ ವ್ಯವಸ್ಥೆ ‌ಪೊಲೀಸರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ಮೂರು ದಿನಗಳಿಂದ‌ ಸಾರ್ವಜನಿಕರು ‌ಸಹಕಾರ ಅಗತ್ಯವೆಂದು‌ ಮನವಿ ಮಾಡಿದರೂ ನಾಗರಿಕರು ಕ್ಯಾರೆ ಅನ್ನದೆ ರಸ್ತೆಗಿದ‌ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ‌ಬಿಗಿ ಗೊಳಿಸಿದ್ದು, ಕೊರೊನಾ‌ ನಿಯಮಗಳನ್ನು‌ ಕಟ್ಟು‌ನಿಟ್ಟಿನ ಕ್ರಮವನ್ನು ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button