ಜಿಲ್ಲೆಯಲ್ಲಿಂದು 06 ಕೋವಿಡ್-19 ಪಾಸಿಟಿವ್ ಪ್ರಕರಣ
ಜಿಲ್ಲೆಯಲ್ಲಿಂದು 06 ಕೋವಿಡ್-19 ಪಾಸಿಟಿವ್ ಪ್ರಕರಣ
ಯಾದಗಿರಿ- ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಡಿ.19 ಶನಿವಾರ 17 ಜನರು ಸಂಪೂರ್ಣ ಚೇತರಿಸಿಕೊಂಡಿದ್ದು, ಒಟ್ಟಾರೆ ಇಲ್ಲಿಯವರೆಗೆ 10,434 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲಿ ಶನಿವಾರ ಹೊಸದಾಗಿ 06 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,545 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ 50 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಯ ಮರೀಚಿಕೆ.?
ಕೋವಿಡ್-19 ಮಹಾಮಾರಿ ಬಗ್ಗೆ ಮೊದಲಿಗೆ ಇದ್ದ ಭಯ ಆತಂಕ ಸದ್ಯ ನಾಗರಿಕರಲ್ಲಿ ಕಂಡು ಬರುತ್ತಿಲ್ಲ. ಅಲ್ಲದೆ ಜನರು ಮದುವೆ, ಮುಂಜಿ ಕಾರ್ಯಕ್ರಮಗಳು ಸರಾಗವಾಗಿ ನಡೆಯುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಮಾಡಿದ ಕಾನೂನು ಕಟ್ಟಳೆ ಯಾವುದು ಪಾಲನೆ ಯಾಗುತ್ತಿಲ್ಲ. ವಿಚಿತ್ರವೆಂದರೆ ಕೊರೊನಾ ಮಹಾಮಾರಿಯ ಆರ್ಭಟವು ಕಡಿಮೆಯಾಗಿದೆ.
ಆದರೆ ಒಂದು ಸತ್ಯ ಜನ ಒಂದಿಷ್ಟು ಸ್ವಚ್ಛತೆ ಅಂತರ ಮತ್ತು ಮಾಸ್ಕ್ ಬಳಸುತ್ತಿದ್ದಾರೆ. ಜ್ವರ ಬಂದರೆ ಸಾಕು ಸಮರ್ಪಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಕೊರೊನಾ ಸಾವಕಾಶ ಕಣ್ಮರೆಯಾದರೆ ಸಾಕು ಎನ್ನುವ ಅಭಿಲಾಷೆ ಎಲ್ಲರದ್ದಾಗಿದೆ.




