ಪ್ರೀತಿ & ಕೋಪಕ್ಕೆ ಮಿತಿ ಇಲ್ಲ ಬದುಕಿಗೆ ಹತ್ತಿರವಾದ ಸಂದೇಶ ಇಲ್ಲಿದೆ ಓದಿ
ಹೊಸ ಕಾರು, ಮಗುವಿನ ಮುಗ್ಧ ಪ್ರೀತಿ ಮತ್ತು ತಂದೆಯ ಕೋಪ
ಒಬ್ಬ ತನ್ನ ಹೊಸ ಕಾರಿಗೆ ಪಾಲಿಶ್ ಮಾಡುತ್ತಿದ್ದ. ತುಂಬಾ ಶ್ರದ್ಧೆಯಿಂದ ಧೂಳಿನ ಚಿಕ್ಕ ಕಣವೂ ಇರದಂತೆ ಫಳಫಳನೆ ಹೊಳೆಯುವಂತೆ ಮತ್ತೆ ಮತ್ತೆ ಉಜ್ಜುತ್ತಿದ್ದ.
ಅಷ್ಟರಲ್ಲಿ ಅಲ್ಲೇ ಆಡುತ್ತಿದ್ದ ಆತನ ಆರು ವರ್ಷದ ಪುಟ್ಟ ಮಗ ಕಲ್ಲಿನ ಚೂರಿನಿಂದ ಕಾರಿನ ಮೇಲೆ ಗೀರತೊಡಗಿದ.
ಈತನಿಗೆ ಕೋಪ ಉರಿದುಹೋಯಿತು. ಅಲ್ಲೇ ಇದ್ದ ಕಬ್ಬಿಣದ ಸರಳಿನಿಂದ ಮಗನ ಕೈ ಮೇಲೆ ರಪರಪನೆ ಹೊಡೆಯತೊಡಗಿದ. ತನ್ನ ಕೋಪ ತಣಿದಮೇಲೆ ರಕ್ತ ಸುರಿಯುತ್ತಿದ್ದ ಮಗನ ಕೈಯ್ಯನ್ನು ನೋಡಿ ಗಾಬರಿಯಿಂದ ಆಸ್ಪತ್ರೆಗೆ ಒಯ್ದ.
ಅಲ್ಲಿ ಡಾಕ್ಟರ್ ನೋಡಿ ಬೆರಳುಗಳಿಗೆ ತುಂಬಾ ಪೆಟ್ಟು ಬಿದ್ದಿರುವ ಕಾರಣ ಬೆರಳುಗಳನ್ನು ಉಳಿಸಲಾಗದೆಂದು ಕತ್ತರಿಸಿ ತೆಗೆದು ಬ್ಯಾಂಡೇಜ್ ಮಾಡಿದರು.
ಸ್ವಲ್ಪ ದಿನದಲ್ಲಿ ಮಗ ಮನೆಗೆ ಬಂದ. ಚಿಂತಿತನಾಗಿ ಕುಳಿತಿದ್ದ ತನ್ನ ಅಪ್ಪನ ಬಳಿ ಮಗ ತನ್ನ ಮೊಂಡಾದ ಕೈ ತೋರಿಸಿ ಕೇಳಿದ, ಅಪ್ಪಾ ನನ್ನ ಕೈಬೆರಳು ಚಿಗುರಿ ಬೆಳೆದು ಮತ್ತೆ ಮೊದಲಿನಂತಾಗಲು ಎಷ್ಟುದಿನ ಬೇಕಾಗತ್ತಪ್ಪಾ?
ಅಪ್ಪನಿಗೆ ದುಃಖ ಉಮ್ಮಳಿಸಿಬಂತು. ಏನೂ ಹೇಳಲಾರದೇ ಮಗನ ಕೈಯ್ಯನ್ನೊಮ್ಮೆ, ಕಾರನ್ನೊಮ್ಮೆ ನೋಡಿದ.
ಎಲ್ಲದಕ್ಕೂ ಈ ಹಾಳಾದ ಕಾರೇ ಕಾರಣ ಅನಿಸಿತು. ಕಾರನ್ನು ದಬದಬನೆ ಒದ್ದ. ಕಾಲು ಸೋಲುವ ವರೆಗೂ ಕಂಡಕಂಡಲ್ಲಿ ಒದ್ದ. ಅಲ್ಲೇ ಕುಸಿದು ಕುಳಿತ.
ಮಗ ಕಾರಿನ ಮೇಲೆ ಅಂದು ಗೀಚಿದ್ದು ಕಂಡಿತು.
“ನನ್ನ ಪ್ರೀತಿಯ ಅಪ್ಪ”.
ಅಪ್ಪ ಕರಗಿಹೋದ.
ಪ್ರೀತಿ ಮತ್ತು ಕೋಪಕ್ಕೆ ಯಾವುದೇ ಮಿತಿ ಇರುವಪದಿಲ್ಲ.
ಪ್ರೀತಿಪೂರ್ಣ ಸುಖಜೀವನಕ್ಕಾಗಿ ಬದುಕಿನ ಮಾರ್ಗವನ್ನು ನಾವೇ ಆಯ್ದುಕೊಳ್ಳಬೇಕು.
ಮನುಷ್ಯರನ್ನು ಪ್ರೀತಿಸಬೇಕು.
ವಸ್ತುಗಳನ್ನು ಉಪಯೋಗಿಸಬೇಕು.
ಆದರೆ ಈಗಿನ ನಮ್ಮ ಸಮಸ್ಯೆಯೆಂದರೆ ಜನರು ವಸ್ತುಗಳನ್ನು ಪ್ರೀತಿಸುತ್ತಾರೆ. ಜನರನ್ನು ಉಪಯೋಗಿಸುತ್ತಾರೆ!
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.