ಕಥೆ

‌ಸಮೃದ್ಧಿ – ಸ್ವಾಭಾವಿಕ ಶ್ರೀಮಂತನಿರಲಿ ಬಡವನಿರಲಿ

ನಿಜವಾದ ಸಮೃದ್ಧಿ ಯಾವುದು ?

ಒಬ್ಬ ಶ್ರೀಮಂತ ವ್ಯಕ್ತಿ “ನನ್ನ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಶ್ರೀಮಂತಿಕೆ, ಸಮೃದ್ಧಿ ಉಂಟಾಗುವಂತೆ ಮಾಡಲು ಏನಾದರೂ ಬರೆದುಕೊಡು ಎಂದು ಶೆಂಗ್ಯಾ ನಲ್ಲಿ ಕೇಳುತ್ತಾನೆ.

ಶೆಂಗ್ಯಾ ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ಹೀಗೆಂದು ಬರೆಯುತ್ತಾನೆ.
“ಮೊದಲು ತಂದೆ ಮರಣ ಹೊಂದುತ್ತಾನೆ, ನಂತರ ಮಗ, ಆ ನಂತರ ಮೊಮ್ಮಗ ಮರಣ ಹೊಂದುತ್ತಾನೆ” ಅದನ್ನು ಕಂಡು ಶ್ರೀಮಂತ ವ್ಯಕ್ತಿಗೆ ಸಿಟ್ಟು ಬರುತ್ತದೆ.

“ನನ್ನ ಕುಟುಂಬಕ್ಕೆ ಖುಷಿ ಕೊಡುವಂತಹ ವಿಚಾರವನ್ನು ಬರೆದುಕೊಡು ಎಂದು ಕೇಳಿದರೆ, ನೀನು ಜೋಕ್ ಮಾಡುತ್ತಿದ್ದೀಯಲ್ಲ?” ಎಂದು ಪ್ರಶ್ನಿಸುತ್ತಾನೆ.

“ಇದರಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿಲ್ಲ. ಇದು ಜೋಕ್ ಅಲ್ಲ. ವಾಸ್ತವ” ಎಂಬುದಾಗಿ ಶೆಂಗ್ಯಾ ವಿವರಿಸುತ್ತಾನೆ. ನೀನು ಸಾಯುವುದಕ್ಕೆ ಮೊದಲೇ ನಿನ್ನ ಮಗ ಮರಣ ಹೊಂದಿದರೆ ಅದರಿಂದ ನಿನಗೆ ತುಂಬಾ ಬೇಸರವಾಗುತ್ತದೆ ಅಲ್ಲವೇ? ನೀನು ಮತ್ತು ನಿನ್ನ ಮಗ ಸಾಯುವುದಕ್ಕೆ ಮೊದಲೇ ನಿನ್ನ ಮೊಮ್ಮಗ ತೀರಿಕೊಂಡರೆ, ನೀವಿಬ್ಬರೂ ದುಃಖ ಅನುಭವಿಸುತ್ತೀರಿ.

ನಾನು ಬರೆದ ರೀತಿಯಲ್ಲಿ ನಿಮ್ಮ ಕುಟುಂಬದಲ್ಲಿ ಸಾವು ಬಂದರೆ ಅದು ಸ್ವಾಭಾವಿಕ ಪ್ರಕ್ರಿಯೆ. ನನ್ನ ಪ್ರಕಾರ ಅದುವೇ ನಿಜವಾದ ಸಮೃದ್ಧಿ ಎಂದು ವಿವರಿಸುತ್ತಾನೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button