ಪ್ರಮುಖ ಸುದ್ದಿ
ತೀವ್ರ ನಿಗಾಘಟಕದಲ್ಲಿ ಸಿದ್ರಾಮಯ್ಯ..! ಆ್ಯಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ
ಆ್ಯಂಜಿಯೋಪ್ಲ್ಯಾಸ್ಟ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಬೆಂಗಳೂರಃ ಮಾಜಿ ಸಿಎಂ ಬುಧವಾರ ನಿಯಮಿತ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರ ಪುತ್ರ ಡಾ.ಯತೀಂದ್ರ ಮಾಜಿ ಸಿಎಂ ಸಿದ್ರಾಮಯ್ಯ ನವರು ಸಾಮಾನ್ಯವಾಗಿ ಆಗಾಗ ಆರೋಗ್ಯ
ತಪಾಸಣೆ ಮಾಡಿಸುತ್ತಿದ್ದಂತೆ ಡಾ.ರಮೇಶ ಅವರನ್ನು ಭೇಟಿ ತಪಾಸಣೆ ಮಾಡಿಕೊಂಡಿದ್ದಾರೆ.
ಹೃದಯಕ್ಕೆ ಸಂಬಂಧಿಸಿದಂತೆ ಆಗಾಗ ಡಾ.ರಮೇಶ ತಪಾಸಣೆ ಮಾಡುತ್ತಿದ್ದರು. ಇದೀಗ ತಪಾಸಣೆ ನಂತರ ಆ್ಯಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ ಮಾಡಬೇಕಿದೆ ಎಂದಿಸ್ದಾರೆ.
ಆ ಹಿನ್ನೆಲೆಯಲ್ಲಿ ಗುರುವಾರ ಮದ್ಯಾಹ್ನದವರಿಗೆ ಅವರನ್ನು ತೀವ್ರ ನಿಗಾಘಟಕದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಮಾಜಿ ಸಿಎಂಸಿದ್ರಾಮಯ್ಯ ನಿರಂತರ ಓಡಾಟದಿಂದ ಬಳಲಿದ್ದು, ಹೃದಯ ಸಂಬಂಧಿತ ಖಾಯಿಲೆ ತಪಾಸಣೆ ಮಾಡಲಾಗಿದೆ. ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ ಎಂದ ತಿಳಿಸಿದರು.