ಕಥೆಸರಣಿ

ಶಾಂತಿನಕೇತನದ ಋಷಿ ಸ್ಮರಿಸಿ ಅವರಂತೆ ಬದುಕಲು ಪ್ರಯತ್ನಿಸಿ.!

ದಿನಕ್ಕೊಂದು ಕಥೆ

ರವೀಂದ್ರನಾಥ್ ಠಾಕೂರ್ ಅವರನ್ನು ಋಷಿ ಅಂಥ ಕರೆದಿದ್ದೇವೆ. ಆತ ಮಹಾನ್ ವಿದ್ವಾಂಸ. ಒಮ್ಮೆ ಶಾಂತಿನಿಕೇತನದಲ್ಲಿ ಕುಳಿತಿರುತ್ತಾರೆ. ಶಾಂತಿನಿಕೇತನ ಹೆಸರು ಎಷ್ಟು ಚೆಂದವಾಗಿದೆ. ಶಾಂತಿನಿಕೇತನದಲ್ಲಿ ಗಿಡಗಳು ಹಸಿರಿನಿಂದ ತುಂಬಿವೆ. ನೀರಿನ ಸಣ್ಣಸಣ್ಣ ಝರಿಗಳಿವೆ. ಏನು ಸುಂದರ ವಾತಾವರಣ!

ಆಕಾಶದಲ್ಲಿ ಹಕ್ಕಿಗಳು ದೂರಕ್ಕೆ ಹಾರಿ ಹಾರಿ ಮತ್ತೆ ಮರಗಳಿಗೆ ಬಂದು ಕೂರುವ ಸಮಯ. ಸೂರ್ಯ ಕೆಳಗಿಳಿಯುತ್ತಿದ್ದಾನೆ. ಮೇಘಗಳಿವೆ. ಸೂರ್ಯನ ಹೊನ್ನಿನ ಕಿರಣಗಳು ಬೆಳಗಿವೆ, ಹಕ್ಕಿಗಳ ಸುಂದರ ಧ್ವನಿ ಇದೆ. ಏನು ಸುಂದರ ವಾತಾವರಣ. ಅದನ್ನು ಹಣ ಕೊಟ್ಟು ಪಡೆಯೋಕೆ ಆಗುವುದಿಲ್ಲ, ಹೃದಯ ಕೊಟ್ಟು ಪಡೆಯಬೇಕು.

ರವೀಂದ್ರನಾಥ್ ಠಾಕೂರ್ ಕುಳಿತಿರುವ ಆ ಸಮಯದಲ್ಲಿ ಅಲ್ಲಿಗೆ ಅವರ ಗೆಳೆಯ ಬರುತ್ತಾನೆ. “ರವೀಂದ್ರರೇ, ನೀವು ಶ್ರೇಷ್ಠ ಜ್ಞಾನಿಗಳು, ಕವಿಗಳು, ಎಂಥ ಸಾಧನೆ ಮಾಡಿದ್ದೀರಿ! ಆದರೆ ನಿಮ್ಮನ್ನು ಜನ ಎಷ್ಟು ಟೀಕೆ ಮಾಡುತ್ತಿದ್ದಾರೆ. ಪತ್ರಿಕೆಗಳಲೆಲ್ಲ ಅವಹೇಳನ ಮಾಡುತ್ತಿದ್ದಾರೆ. ನೀವು ನೋಡಿದಿರೇನು?”

ರವೀಂದ್ರನಾಥ ಠಾಕೂರ್ ಹೇಳಿದರು: “ನೋಡಲಿಕ್ಕೆ ವೇಳೆ ಇಲ್ಲ”.

ನಮ್ಮಂಥವರಾದರೆ ಓದಿ ಮರು ಟೀಕೆಗೆ ತೊಡಗುತ್ತಿದ್ದೆವು. ಆದರೆ ಇವರಿಗೆ ಅವುಗಳನ್ನು ಓದುವುದಕ್ಕೂ ವೇಳೆ ಇಲ್ಲ. ನಿಸರ್ಗ ಅಷ್ಟು ಶ್ರೀಮಂತವಾಗಿದೆ.
Hundred years are not sufficient for enjoying the beauty.
ರವೀಂದ್ರರಿಗೆ ಏಕೆ ಋಷಿ ಅಂಥ ಕರೆದೆವು? ಅವರು ಪುಸ್ತಕ ಬರೆದಿದ್ದಾರೆ ಅಂಥ ಅಲ್ಲ. ಅವರಲ್ಲಿ ಅಂಥ ಶಾಂತ ವ್ಯಕ್ತಿತ್ವ ಇತ್ತು. ಇಂಥವರನ್ನು ನೆನೆಯುವುದು ನಮ್ಮಂಥವರಿಗೆ ಪರಮ ಸುಖ ಏನಂತೀರಿ.?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button