ವಾವ್..ಎಂಥಹ ಪ್ರೀತಿ ಮಾಧುರ್ಯ, ಮಾನವೀಯತೆಯ ಒಳನೋಟ ಇದನ್ನೋದಿ
ವಯಸ್ಸಾದ ಮುದುಕಿ, ಆರೇಂಜ್ ಹಣ್ಣು, ಆ ವ್ಯಕ್ತಿ ತೋರಿದ ಪ್ರೀತಿ, ಕಾಳಜಿ ನಮಗೆಲ್ಲ ದಾರಿ ದೀಪ..ಅದ್ಭುತ ನೀತಿ…ಓದಿ
ಒಬ್ಬ ವ್ಯಕ್ತಿ ಒಬ್ಬರು ವಯಸ್ಸಾದ ಮಹಿಳೆಯಿಂದ ಯಾವಾಗಲೂ ‘ಆರೆಂಜ್’ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕ ಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.
ಇದು ಪ್ರತಿದಿನ ಆವರ್ತಿಸುತ್ತಿದ್ದ. ಆತನ ಪತ್ನಿಯು ಕೇಳುತ್ತಾಳೆ – ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?
ಆತ ನಗುತ್ತಾ ಹೇಳುತ್ತಾನೆ – ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಯು ಹಣವಿಲ್ಲದೇ ಅಥವಾ ನಷ್ಟವಿಲ್ಲದೆ ಒಂದು ಆರೆಂಜನ್ನು ತಿನ್ನಬಹುದಲ್ಲಾ.?
ಎಲ್ಲಾ ದಿನವೂ ಆ ಅಂಗಡಿಯ ದೃಶ್ಯವನ್ನು ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸಾದ ಮಹಿಳೆಯತ್ರ ಕೇಳುತ್ತಾಳೆ – ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?
ಅದಕ್ಕೆ ಆ ವಯಸ್ಸಾದ ಮಹಿಳೆ ನಗುತ್ತಾ ಹೇಳುತ್ತಾಳೆ ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ. ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ….! ಆದ್ದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು …!
ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ ಪ್ರೀತಿಯತೆಯ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882