ಭಿಕ್ಷುಕನ ಹಂಚಿಕೊಂಡು ತಿನ್ನುವ ನಡೆ
ಕೊಟ್ಟಿದ್ದೆಲ್ಲ ನನಗೆ
ಈಶ್ವರನ ದೇಗುಲದ ಮುಂದೆ ಹಣ್ಣು ಭಿಕ್ಷುಕ ಕುಳಿತಿದ್ದ. ಹರಕಲು ಅಂಗಿ, ತುಂಡು ಪಂಚೆ, ಕುರುಚಲು ಗಡ್ಡ ಎದ್ದು ತೋರುತ್ತಿತ್ತು. ಎಣ್ಣೆ ನೀರು ಕಾಣದ ತಲೆಕೂದಲು ಗಂಟು ಕಟ್ಟಿತ್ತು.
ಪ್ರತಿನಿತ್ಯ ದೇಗುಲಕ್ಕೆ ಬರುವ ಯಾತ್ರಿಗಳ ಮುಂದೆ ಕೈಚಾಚಿ ‘ಜೈ ಶಿವ’ ಎನ್ನುತ್ತಿದ್ದ. ಕೆಲವರು ಹಣ ಕೊಟ್ಟರೆ, ಕೆಲವರು ತೆಂಗಿನ ಕಾಯಿ ಇಲ್ಲವೆ ಬಾಳೆಹಣ್ಣನ್ನು ನೀಡುತ್ತಿದ್ದರು.
ಆದರೆ ತನಗೆ ಕೊಟ್ಟದ್ದನ್ನು ಬೇರೆಯವರಿಗೆ ಕೊಡದೆ ಒಂದು ದಿನವೂ ತಾನೊಬ್ಬನೇ ಏನನ್ನೂ ತಿನ್ನುತ್ತಿರಲಿಲ್ಲ. ಇವನಿಂದ ಕೊಡುವಾಗ ಪಡೆಯಲು ಯಾರೂ ಸಿಗದಿದ್ದರೆ ಬೀದಿ ನಾಯಿಗಳನ್ನು ಪ್ರೀತಿಯಿಂದ ಹುಡುಕಿಕೊಂಡು ಹೋಗಿಯಾದರೂ ಹಾಕಿ ಸಂತೋಷಪಡುತ್ತಿದ್ದ.
ಸದಾ ಆ ಭಿಕ್ಷುಕನನ್ನು ಗಮನಿಸುವ ಒಬ್ಬಾತ ಒಂದು ದಿನ “ನೀನೇ ತಿರುಪೆಯವನು. ನಿನಗೆ ದೊರೆತದ್ದನ್ನು ತಿನ್ನುವ ಬದಲಿಗೆ ಯಾಕೆ ಹಂಚಿಕೊಂಡು ತಿನ್ನುವಿ?” ಎಂಬುದಾಗಿ ಕೇಳಿಯೇ ಬಿಟ್ಟ.
ಭಿಕ್ಷುಕ ಕಿರುನಗೆ ಬೀರಿ ಹೇಳಿದ ಮಗೂ, ಈಗ ನಾನೇ ಭಿಕ್ಷೆ ಬೇಡುವವನಾಗಿದ್ದೇನೆ. ಬಹುಶಃ ಹಿಂದಿನ ಜನ್ಮದಲ್ಲಿ ಬಹಳ ಲೋಭಿಯಾಗಿ ಯಾರಿಗೂ ಏನನ್ನೂ ಕೊಡದೆ ಕಡು ಸ್ವಾರ್ಥಿಯಾಗಿರಬೇಕು. ಅದೆಷ್ಟು ಜನರ ಹೊಟ್ಟೆ ಮೇಲೆ ಹೊಡೆದು ನೋಯಿಸಿದ್ದೇನೋ…. ಹಾಗೆಂದೇ ಈಗ ಈ ರೀತಿ ದುಸ್ಥಿತಿ ಬಂದಿದೆ.
ಆದರೆ ಈಗ ನಾನು ಮಾಡುವ ದಾನಧರ್ಮ ದಿಂದಲಾದರೂ ಮುಂದಿನ ಜನ್ಮದಲ್ಲಿ ನಿನ್ನಂತೆ ಇರಬಹುದೆಂದೇ ನಂಬಿರುವೆ. ಅದಕ್ಕೆಂದೇ ಈ ಪ್ರಾಯಶ್ಚಿತ್ತ ಅಷ್ಟೇ.
ನೀತಿ :–
ನಿಜ, ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.