ಕಾಯಕ ಜೀವಿ ಮೊದಲೋ..ದೇವಾಲಯದ ಪೂಜಾರಿ ಮೊದಲೋ..?
ಸರಳತೆಯ ಮೊರೆ
ಮೋಚಿ ಮತ್ತು ದೇಗುಲದ ಪೂಜಾರಿ ಒಂದೇ ದಿನ ಸತ್ತರು. ಇಬ್ಬರೂ ಸ್ವರ್ಗದ ಬಾಗಿಲಿಗೆ ಹೋದರು.
ಭೂಮಿಯಲ್ಲಿರುವಾಗ ಮೋಚಿ ದಿನಾಲೂ ತನ್ನ ಗುಡಿಸಲಿನ ಮುಂದೆ ಚಪ್ಪಲಿ, ಬೂಟ್ಸ್‌ಗಳ ರಿಪೇರಿ ಮಾಡುತ್ತಿದ್ದ. ಆದರೆ ಪೂಜಾರಿ ದಿನಪೂರ್ತಿ ದೇಗುಲದಲ್ಲಿ ಪೂಜೆ ಮಾಡುತ್ತಿದ್ದ. ಆ ಮೋಚಿ ಒಂದು ದಿನ ಕೂಡಾ ದೇಗುಲಕ್ಕೆ ಬಂದದ್ದೇ ಇಲ್ಲ. ಹಾಗಿರುವಾಗ ಅವನಿಗೆ ಮೊದಲು ಒಳಗೆ ಹೋಗಲು ಆಹ್ವಾನ… ಇದೆಂಥ ನ್ಯಾಯ?
ದೇವದೂತ ಹೇಳಿದ ಪೂಜಾರಿ, ನಿನ್ನ ಅನಿಸಿಕೆ ತಪ್ಪು. ಮೋಚಿಯೂ ದಿನಾಲೂ ರಾತ್ರಿ ಮಲಗುವ ಮೊದಲು ‘ಹೇ ದೇವರೇ, ಎಲ್ಲರಂತೆ ನೀನಿರುವ ದೇಗುಲ ಬಂದು ಪ್ರಾರ್ಥಿಸಲು ನನಗಂತೂ ಬಿಡುವಾಗುತ್ತಿಲ್ಲ.
ನನ್ನನ್ನು ಕ್ಷಮಿಸು ತಂದೇ, ನನ್ನ ಪ್ರತಿಯೊಂದು ಕೆಲಸ ಮಾಡುವಾಗಲೂ ನಿನ್ನ ನೆನಹಂತೂ ನನಗೆ ಆಗುತ್ತಿರುತ್ತದೆ’ ಎಂದು ಕಂಬನಿ ಹಾಕಿ ಮೊರೆಯುತ್ತಿದ್ದ. ಆದರೆ ನೀನೋ ದೇಹ ದೇವರ ಮುಂದೆ ಇದ್ದರೂ ಮನಸ್ಸು ಕೇವಲ ಲೌಕಿಕದಲ್ಲೇ ಮುಳುಗಿತ್ತೆಂದು ನಾನು ಬೇರೆ ನೆನಪಿಸಬೇಕಾಗಿಲ್ಲ. ಹಾಗೆಂದೇ ಅವನಿಗೆ ಮೊದಲ ಅವಕಾಶ, ನಿನಗೆ ಆನಂತರವೇ ತಿಳಿ
ದೇವದೂತನ ಮಾತು ಕೇಳಿ ಪೂಜಾರಿ ನಾಚಿಕೆಯಿಂದ ತಲೆತಗ್ಗಿಸಿದ.
ನೀತಿ :– ದೇವರನ್ನು ಒಲಿಸಿಕೊಳ್ಳಲು ದೇಹ-ಮನಸ್ಸು ಒಂದೇ ಕಡೆ ಇದ್ದರೆ ಸಾಧ್ಯ. ಇದೊಂದು ಸರಳ ಉಪಾಯ ದೃಷ್ಟಾಂತ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.